How To Download Ration Card: ಕಳೆದು ಹೋದ ನಿಮ್ಮ ರೇಷನ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

How To Download Ration Card: ಕಳೆದು ಹೋದ ನಿಮ್ಮ ರೇಷನ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಈಗ ಒಂದು ವೇಳೆ ಸ್ನೇಹಿತರೆ ನಿಮ್ಮ ರೇಷನ್ ಕಾರ್ಡ್ ಮನೆಯಲ್ಲಿ ಕಳೆದು ಹೋದರೆ ಅಥವಾ ತುರ್ತು ಸಂದರ್ಭದಲ್ಲಿ ನಿಮಗೆ ಆ ಒಂದು ರೇಷನ್ ಕಾರ್ಡ್ ಬೇಕಾದರೆ ಇನ್ನು ಮುಂದೆ ಚಿಂತೆ ಪಡುವ ಅವಶ್ಯಕತೆ ಇಲ್ಲ. ಈಗ ನೀವು ನಿಮ್ಮ ಮನೆಯಲ್ಲಿಯೇ ಮೊಬೈಲ್ ಅಥವಾ ಕಂಪ್ಯೂಟರ್ನಲ್ಲಿ ಕೆಲವೇ ನಿಮಿಷಗಳಲ್ಲಿ ಈ ಒಂದು ರೇಷನ್ ಕಾರ್ಡ್ ಚೀಟಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಈ ಒಂದು ರೇಷನ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಿಕೊಳ್ಳಲು ಯಾವುದೇ ಕಚೇರಿಗೆ ಹೋಗುವ ಅವಶ್ಯಕತೆ ಇಲ್ಲ ಹಾಗೂ ತಿರುಗಾಡುವ ಅವಶ್ಯಕತೆ ಇರುವುದಿಲ್ಲ.

ಈಗ ಈ ಒಂದು ರೇಷನ್ ಕಾರ್ಡ್ ಈಗ ಬಹುಮುಖ್ಯ ದಾಖಲೆಯಾಗಿರುವ ಕಾರಣ ಈಗ ನೀವು ಈ ಕಡ್ಡಾಯವಾಗಿ ಈ ಒಂದು ರೇಷನ್ ಕಾರ್ಡನ್ನು ಹೊಂದಿರಲೇಬೇಕಾಗುತ್ತದೆ. ಆಗ ಮಾತ್ರ ನೀವು ಈಗ ಸರ್ಕಾರವು ನೀಡುತ್ತಿರುವ ಪ್ರತಿಯೊಂದು ಯೋಜನೆಗಳ ಲಾಭಗಳನ್ನು ಪಡೆದುಕೊಳ್ಳಲು ಸಹಾಯವನ್ನು ಮಾಡುತ್ತದೆ. ಹಾಗಾಗಿ ನೀವು ಒಂದು ವೇಳೆ ನಿಮ್ಮ ರೇಷನ್ ಕಾರ್ಡ್ ಕಳೆದು ಹೋದರೆ ನಾವು ಈಗ ಈ ಒಂದು ಲೇಖನದಲ್ಲಿ ತಿಳಿಸಿರುವ ಸಂಪೂರ್ಣವಾದ ಮಾಹಿತಿಗಳನ್ನು ಕೊನೆಯವರೆಗೂ ಓದಿಕೊಂಡು ಈಗ ನೀವು ಕೂಡ ನಿಮ್ಮ ರೇಷನ್ ಕಾರ್ಡನ್ನು ಡೌನ್ಲೋಡ್ ಮಾಡಿಕೊಳ್ಳಿ.

ರೇಷನ್ ಕಾರ್ಡ್ ನ ಮಹತ್ವ

ಈಗ ಈ ಒಂದು ರೇಷನ್ ಕಾರ್ಡನ್ನು ಪಡೆದುಕೊಳ್ಳುವ ಮುಖ್ಯ ಉದ್ದೇಶವೇನೆಂದರೆ ಈಗ ಈ ಒಂದು ರೇಷನ್ ಕಾರ್ಡ್ ನ ಮೂಲಕ ಪ್ರತಿ ತಿಂಗಳು ಪ್ರತಿ ಕುಟುಂಬಕ್ಕೂ ಕೂಡ ಈಗ ಉಚಿತವಾಗಿ ಅಕ್ಕಿ  ಅನ್ನು ಅವರು ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಈಗ ಸರ್ಕಾರದ ಅತ್ಯುತ್ತಮ ಯೋಜನೆಯದಂತ ಈ ಒಂದು ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಈಗ ನೀವು ಪ್ರತಿ ತಿಂಗಳು 2000 ಹಣವನ್ನು ಪಡೆದುಕೊಳ್ಳಬೇಕೆಂದರೆ ಈ ಒಂದು ರೇಷನ್ ಕಾರ್ಡ್ ಬಹುಮುಖ್ಯ ದಾಖಲೆ ಆಗಿದೆ.

ಈಗ ಕೇವಲ ಈ ಒಂದು ಗೃಹಲಕ್ಷ್ಮಿ ಯೋಜನೆ ಅಷ್ಟೇ ಅಲ್ಲದೆ ಈಗ ನೀವೇನಾದರೂ ಉಚಿತ ಮನೆಯನ್ನು ಪಡೆದುಕೊಳ್ಳಬಹುದಾಗಿರಬಹುದು ಅಥವಾ ಇನ್ನೂ ಹಲವಾರು ರೀತಿಯ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಮಾಡಬೇಕೆಂದರೆ ನಿಮಗೆ ಈ ಒಂದು ರೇಷನ್ ಕಾರ್ಡ್ ಕಡ್ಡಾಯವಾಗಿ ಬೇಕಾಗುತ್ತದೆ. ಆದ ಕಾರಣ ಈಗ ನೀವು ಕೂಡ ನಿಮ್ಮ ಮನೆಯಲ್ಲಿ ರೇಷನ್ ಕಾರ್ಡ್ ಅನ್ನು ತೆಗೆದು ಇಟ್ಟುಕೊಳ್ಳುವುದು ಉತ್ತಮ. ಒಂದು ವೇಳೆ ನಿಮ್ಮ ರೇಷನ್ ಕಾರ್ಡ್ ಕಳೆದು ಹೋದರೆ ಈಗ ನಾವು ನಿಮಗೆ ಈ ಕೆಳಗೆ ತಿಳಿಸಿರುವ ಪ್ರತಿಯೊಂದು ಹಂತಗಳನ್ನು ಸರಿಯಾದ ರೀತಿಯಲ್ಲಿ ನೀವು ಕೂಡ ರೇಷನ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.

ಅಗತ್ಯವಿರುವ ದಾಖಲೆಗಳು ಏನು?

ಈಗ ನೀವು ನಿಮ್ಮ ರೇಷನ್ ಕಾರ್ಡ್ ಕಳೆದು ಹೋಗಿದ್ದರೆ ಆ ಒಂದು ರೇಷನ್ ಕಾರ್ಡ್ ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈಗ ಮೊದಲು ನಿಮ್ಮ ಬಳಿ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಇರಬೇಕಾಗುತ್ತದೆ. ಆನಂತರ ನಿಮ್ಮ ರೇಷನ್ ಕಾರ್ಡ್ ಗೆ ಲಿಂಕ್ ಆಗಿರೋ ಮೊಬೈಲ್ ನಂಬರ್ ಅಂದರೆ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಇರುವಂತಹ ಮೊಬೈಲ್ ನಂಬರ್ ಚಾಲ್ತಿಯಲ್ಲಿ ಇರಬೇಕಾಗುತ್ತದೆ. ಏಕೆಂದರೆ ಡೌನ್ಲೋಡ್ ಮಾಡಿಕೊಳ್ಳಲು ಓಟಿಪಿ ಮೂಲಕ ಮಾಡಲಾಗುತ್ತದೆ. ಆದಕಾರಣ ಈಗ ನೀವು ಕೂಡ ಈ ನಿಮ್ಮ ಮೊಬೈಲ್ ನಂಬರನ್ನು ಚಾಲ್ತಿಯಲ್ಲಿ ಇಟ್ಟಿರಬೇಕು. ಆಗ ಮಾತ್ರ ನೀವು ಡೌನ್ಲೋಡ್ ಮಾಡಿಕೊಳ್ಳ ಬಹುದು.

ಡೌನ್ಲೋಡ್ ಮಾಡುವುದು ಹೇಗೆ?

  • ಈಗ ನೀವು ಕೂಡ ನಿಮ್ಮ ರೇಷನ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬೇಕೆಂದರೆ ನಾವು ಈ ಕೆಳಗೆ ನೀಡಿರುವ ಅಧಿಕೃತ ಲಿಂಕಿನ ಮೇಲೆ ನೀವು ಕ್ಲಿಕ್ ಮಾಡಿ.
  • ಆನಂತರ ಮುಖ್ಯ ಪುಟದಲ್ಲಿ ಈಗ E Servies ಮೇಲೆ ಕ್ಲಿಕ್ ಮಾಡಿ.
  • ಆನಂತರ ಅದರಲ್ಲಿ ಡೌನ್ಲೋಡ್ ರೇಷನ್ ಕಾರ್ಡ್ ಆಯ್ಕೆಯನ್ನು  ಮಾಡಿಕೊಳ್ಳಿ.
  • ಆನಂತರ ಅದರಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು ನೀವು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ.
  • ಆನಂತರ ನೀವು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.
  • ತದನಂತರ ನಿಮ್ಮ ಮೊಬೈಲ್ ಗೆ ಬರುವ ಓಟಿಪಿಯನ್ನು ಅಲ್ಲಿ ಎಂಟರ್ ಮಾಡಿ.
  • ಆನಂತರ ನಿಮ್ಮ ಮುಂದೆ ನಿಮ್ಮ ರೇಷನ್ ಕಾರ್ಡ್ ದೊರೆಯುತ್ತದೆ ನೀವು ಅದನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಇಲ್ಲವೇ ಪ್ರಿಂಟನ್ನು ತೆಗೆದುಕೊಳ್ಳು ಬಹುದು.

ರೇಷನ್ ಕಾರ್ಡ್ ನಂಬರ್ ಅನ್ನು ತೆಗೆದುಕೊಳ್ಳುವುದು ಹೇಗೆ?

ಈಗ ಒಂದು ವೇಳೆ ನೀವೇನಾದರೂ ನಿಮ್ಮ ರೇಷನ್ ಕಾರ್ಡ್ ನಂಬರನ್ನು ಮರೆತು ಹೋಗಿದ್ದರೆ ಈಗ ಚಿಂತೆ ಪಡುವ ಅವಶ್ಯಕತೆ ಇಲ್ಲ. ಏಕೆಂದರೆ ಈಗ ನೀವು ಆಹಾರ ಇಲಾಖೆ ಅಧಿಕೃತ ವೆಬ್ಸೈಟ್ ಗೆ ಹೋಗಿ ಅದರಲ್ಲಿ ಈ ಸರ್ವಿಸಸ್ ಮೇಲೆ ಕ್ಲಿಕ್ ಮಾಡಿ. ಆನಂತರ ನೀವು ಅದರಲ್ಲಿ ರೇಷನ್ ಕಾರ್ಡ್ ಡೀಟೇಲ್ಸ್ ಮೇಲೆ ಕ್ಲಿಕ್ ಮಾಡಿ. ಅದರಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಹಾಗೂ ಕುಟುಂಬದ ಮುಖ್ಯಸ್ಥರು ಹಾಗೂ ಜಿಲ್ಲೆ ತಾಲೂಕುಗಳನ್ನು ಸೆಲೆಕ್ಟ್ ಮಾಡಿ. ಆನಂತರದಲ್ಲಿ ನೀವು ನಿಮ್ಮ ರೇಷನ್ ಕಾರ್ಡ್ ನಂಬರನ್ನು ನೀವು ಪಡೆದುಕೊಳ್ಳಬಹುದು.

LINK : Download Now 

Leave a Comment