Bele Amount Released Update News: ಈಗ ಬೆಳೆ ಪರಿಹಾರ ಬಂದಿಲ್ಲ ಅಂದರೆ ಕೂಡಲೇ ಈ ಕೆಲಸ ಮಾಡಿ. ಇಲ್ಲಿದೆ ನೋಡಿ ಮಾಹಿತಿ.
ಈಗ ನಮ್ಮ ರಾಜ್ಯದಲ್ಲಿ ಕಳೆದ ಆಗಸ್ಟ್ ಮತ್ತು ಸಪ್ಟೆಂಬರ್ ತಿಂಗಳುಗಳಲ್ಲಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಹೆಚ್ಚಾದ ಮಳೆಯಿಂದಾಗಿ ರೈತರ ಬೆಳೆಗಳು ದೊಡ್ಡ ಪ್ರಮಾಣದಲ್ಲಿ ಹಾಳು ಆಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅದೇ ರೀತಿಯಾಗಿ ಈಗ ರಾಗಿ, ಜೋಳ, ಭತ್ತ, ತರಕಾರಿ, ತೊಗರಿ, ತೋಟಗಾರಿಕಾ ಬೆಳೆಗಳಿಗೂ ಇನ್ನು ಹಲವಾರು ರೀತಿಯ ಬೆಳೆಗಳು ಈಗಾಗಲೇ ನೀರಿನಲ್ಲಿ ಮುಳುಗಿ ರೈತರು ಲಕ್ಷಾಂತರ ರೂಪಾಯಿ ನಷ್ಟಗಳನ್ನು ಅನುಭವಿಸುತ್ತಾ ಇದ್ದಾರೆ.

ಈಗ ಈ ಒಂದು ಹಿನ್ನೆಲೆಯಲ್ಲಿ ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಈಗ ಬೆಳೆ ಹಾನಿ ಪರಿಹಾರ ಬಿಡುಗಡೆ ಮಾಡುತ್ತಾ ಇದೆ. ಅದೇ ರೀತಿಯಾಗಿ ಈಗ 2025ರ ನವೆಂಬರ್ ತಿಂಗಳ ಗಳಿಗೆ ಈ ಒಂದು ಪ್ರಕ್ರಿಯೆಗೆ ತೀವ್ರ ಗತಿಯಲ್ಲಿ ಸಾಗುತ್ತಿದ್ದು. ಈಗಾಗಲೇ ಕೆಲವೊಂದು ಜಿಲ್ಲೆಗಳ ರೈತರ ಖಾತೆಗಳಿಗೆ ಈಗಾಗಲೇ ಹಣವನ್ನು ಜಮಾ ಮಾಡುವ ಪ್ರಕ್ರಿಯೆ ಪ್ರಾರಂಭಗೊಂಡಿದೆ.
ಅದೇ ರೀತಿಯಾಗಿ ಈಗ ಇನ್ನೂ ಅನೇಕ ರೈತರ ಖಾತೆಗಳಿಗೆ ಈ ಒಂದು ಯೋಜನೆ ಹಣ ಬಂದಿಲ್ಲ. ಇದಕ್ಕೆ ಮುಖ್ಯ ಕಾರಣಗಳು ಏನೆಂದರೆ ಫ್ರೂಟ್ಸ್ ನೊಂದಣಿ ಆಧಾರ್ ಬ್ಯಾಂಕ್ ಖಾತೆಗೆ ಲಿಂಕ್ ಆಗದೆ ಇರುವುದು. EKYC ಮತ್ತು ದಾಖಲೆಗಳಲ್ಲಿ ಇರುವಂತ ತಾಂತ್ರಿಕ ತೊಂದರೆಗಳಿಂದ ಈ ಒಂದು ಯೋಜನೆಯ ಹಣ ಬಂದು ತಲುಪಿಲ್ಲ. ಈಗ ಈ ಒಂದು ಯೋಜನೆ ಹಣವನ್ನು ತಲುಪಲು ನೀವು ಏನು ಮಾಡಬೇಕೆಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಒಂದು ಲೇಖನದಲ್ಲಿ ಇದೆ.
ಬೆಳೆ ಹಾನಿ ಪರಿಹಾರ ಧನ ಎಷ್ಟು?
ಈಗ ನಮ್ಮ ಕೇಂದ್ರ ಸರ್ಕಾರದ NDRF ಮಾರ್ಗಸೂಚಿಯಂತೆ ಮತ್ತು ರಾಜ್ಯ ಸರ್ಕಾರದ ಹೆಚ್ಚುವರಿ ನೆರವಿನೊಂದಿಗೆ ಈ ಒಂದು ಬಾರಿ ರೈತರಿಗೆ ಅತ್ಯಂತ ಸುಲಭವಾಗಿ ಪರಿಹಾರವನ್ನು ನೀಡಲಾಗುತ್ತ ಇದೆ.
- ಈಗ ನಮ್ಮ ರಾಜ್ಯದಲ್ಲಿ ಇರುವಂತಹ ಮಳೆ ಆಶ್ರಿತ ಬೆಳೆಗಳಿಗೆ ಈಗ ಗರಿಷ್ಠ ಸರ್ಕಾರವು 17000 ವರೆಗೆ ಪರಿಹಾರ ಧನವನ್ನು ಬಿಡುಗಡೆ ಮಾಡಿದೆ.
- ಆನಂತರ ನೀರಾವರಿ ಬೆಳೆಗಳಿಗೆ ಈಗ ಸರ್ಕಾರವು 25000 ರವರೆಗೆ ಹಣವನ್ನು ಬಿಡುಗಡೆ ಮಾಡಿದೆ.
- ಆನಂತರ ಬಹು ವಾರ್ಷಿಕ ಬೆಳೆಗಳು ಹಾಗೂ ತೋಟಗಾರಿಕಾ ಬೆಳೆಗಳಿಗೆ ಈಗ ಗರಿಷ್ಠ 31000 ವರೆಗೆ ಪರಿಹಾರ ಧನವನ್ನು ಬಿಡುಗಡೆ ಮಾಡಿದೆ.
ಅದೇ ರೀತಿಯಾಗಿ ಹೀಗೆ ಗರಿಷ್ಠ ಎರಡು ಹೆಕ್ಟರ್ ವರೆಗೆ ಮಾತ್ರ ಈ ಒಂದು ಪರಿಹಾರವನ್ನು ಪಡೆಯಬಹುದು. ಅಂದರೆ ಒಬ್ಬ ರೈತನಿಗೆ ಕೇವಲ 62,000 ಹಣ ಮಾತ್ರ ಜಮಾ ಆಗುತ್ತದೆ.
ಅದೇ ರೀತಿಯಾಗಿ ನಮ್ಮ ಕೇಂದ್ರ ಸರ್ಕಾರ ಈಗಾಗಲೇ ರೂ.391 ಕೋಟಿ ಮೊತ್ತವನ್ನು ರಾಜ್ಯಕ್ಕೆ ಬಿಡುಗಡೆ ಮಾಡಿದ್ದು. ಈಗ ನಮ್ಮ ರಾಜ್ಯ ಸರ್ಕಾರ ತನ್ನ ಪಾಲನ್ನು ಸೇರಿಸಿ. ಈಗ DBT ಮೂಲಕ ರೈತರ ಖಾತೆಗಳಿಗೆ ಹಣವನ್ನು ಜಮಾ ಮಾಡುವುದು ಬಾಕಿ ಇದೆ.
ಯಾವ ಜಿಲ್ಲೆಗಳಿಗೆ ಹಣ ಜಮಾ ಪ್ರಾರಂಭವಾಗಿದೆ
ಈಗ ಈ ಒಂದು ನವೆಂಬರ್ 2025 ರ ಮಧ್ಯದ ವೇಳೆಗೆ ಈ ಕೆಳಗಿನ ಜಿಲ್ಲೆಗಳಲ್ಲಿ ಪರಿಹಾರ ಧನವನ್ನು ಜಮಾ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ಅವುಗಳು ಏನೆಂದರೆ ಯಾದಗಿರಿ, ಕಲಬುರ್ಗಿ, ಬೆಳಗಾವಿ, ವಿಜಯಪುರ, ಕಲಬುರ್ಗಿ, ಬೀದರ್, ಗದಗ, ಬೆಳಗಾವಿ, ಬಳ್ಳಾರಿ, ರಾಯಚೂರು ಈ ಒಂದು ಜಿಲ್ಲೆಗಳಿಗೆ ಈಗಾಗಲೇ ಹಣ ಜಮಾ ಆಗುವ ಪ್ರಕ್ರಿಯೆ ಪ್ರಾರಂಭವಾಗಿದೆ.
ಅದೇ ರೀತಿಯಾಗಿ ಇನ್ನು ಉಳಿದಂತಹ ಜಿಲ್ಲೆಗಳಾದ ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಂಗಳೂರು, ಹಾಸನ, ದಾವಣಗೆರೆ ಏನು ಹಲವಾರು ಜಿಲ್ಲೆಗಳಿಗೆ ಈಗ ಇನ್ನೂ ಕೆಲವೇ ದಿನಗಳಲ್ಲಿ ಒಂದು ಹಣವು ಬಿಡುಗಡೆಯಾಗುವ ಸಾಧ್ಯತೆ ಇದೆ. ಅದೇ ರೀತಿಯಾಗಿ ಈಗಾಗಲೇ ಕೆಲವೊಂದು ರಾಜ್ಯದ ರೈತರಿಗೆ ಈ ಒಂದು ಹಣವು ಈಗಾಗಲೇ ಜಮಾ ಆಗುತ್ತಾ ಇದೆ.
ಹಣ ಬರದೆ ಇದ್ದರೆ ಈ ಕೆಲಸಗಳನ್ನು ಮಾಡಿ
- ನಿಮ್ಮ ಖಾತೆಗೆ ಈ ಒಂದು ಹಣವು ಬಾರದೆ ಇದ್ದರೆ ನೀವು ಫ್ರೂಟ್ಸ್ ಪೋರ್ಟಲ್ ನಲ್ಲಿ ಮೊದಲು ನೋಂದಣಿಯನ್ನು ಮಾಡಿಕೊಳ್ಳಿ.
- ಆನಂತರ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸಿಕೊಳ್ಳಿ.
- ನಂತರ ನೀವು ಕಡ್ಡಾಯವಾಗಿ ನಿಮ್ಮ ಬ್ಯಾಂಕ್ ಖಾತೆಗೆ NPCI ಆಗಿದೆ ಇಲ್ಲವೇ ಎಂಬುದನ್ನು ಚೆಕ್ ಮಾಡಿಕೊಳ್ಳಿ.
- ಆನಂತರ ನಿಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಖಾತೆ ವಿವರ ಹಾಗೂ ಫ್ರೂಟ್ಸ್ ID ಅಷ್ಟೇ ಅಲ್ಲದೆ ಆರ್ಟಿಸಿಯಲ್ಲಿ ಒಂದೇ ಹೆಸರು ಇರಬೇಕು.
- ಆನಂತರ ನೀವು ಫ್ರೂಟ್ಸ್ ಪೋರ್ಟಲ್ ನಲ್ಲಿ EKYC ಕಡ್ಡಾಯವಾಗಿ ಮಾಡಬೇಕಾಗುತ್ತದೆ.
ಸ್ಟೇಟಸ್ ಚೆಕ್ ಮಾಡುವುದು ಹೇಗೆ?
- ಮೊದಲು ನಿಮ್ಮ ಅಧಿಕೃತ ವೆಬ್ ಸೈಟ್ ಗೆ ಭೇಟಿಯನ್ನು ನೀಡಬೇಕಾಗುತ್ತದೆ.
- ಆನಂತರ ನೀವು ಅದರಲ್ಲಿ ನಿಮ್ಮ ಆಧಾರ್ ಸಂಖ್ಯೆ ಅಥವಾ FID ನಂಬರ್ ಅನ್ನು ಎಂಟರ್ ಮಾಡಬೇಕಾಗುತ್ತದೆ.
- ಆನಂತರ ಅದರಲ್ಲಿ ಸರ್ಚ್ ಮೇಲೆ ಕ್ಲಿಕ್ ಮಾಡಿ. ಹಾಗೆ ಪಟ್ಟಿ ಪರಿಹಾರ ಮತ್ತು ಮತ್ತು ಸ್ಟೇಟಸ್ ಅನ್ನು ನೀವು ತಿಳಿದುಕೊಳ್ಳಬಹುದು.