Vidyanidhi Scholarship For Students: ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಪ್ರಾರಂಭ! ಈಗಲೇ ಅರ್ಜಿಯನ್ನು ಸಲ್ಲಿಸಿ.
ಈಗ ನಮ್ಮ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ ಅಡಿಯಲ್ಲಿ ಈಗ ರೈತರ ಮಕ್ಕಳಿಗೆ ವರ್ಷಕ್ಕೆ 2,000ದಿಂದ 11000 ದವರೆಗೆ ಸ್ಕಾಲರ್ಶಿಫ ಅನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತಾ ಇದೆ.

ಈಗ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಿದಂತಹ ಪ್ರತಿಯೊಬ್ಬ ರೈತ ವಿದ್ಯಾರ್ಥಿಗಳಿಗೆ ಈಗ ಅವರು 11,000 ದವರೆಗೆ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಬಹುದು, ಈಗ ನೀವು ಕೂಡ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈಗ ನಮ್ಮ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ ಏಕೆಂದರೆ ಇದರಲ್ಲಿ ಅರ್ಜಿ ಸಲ್ಲಿಸಲು ಅರ್ಹತೆಗಳು ಏನು? ಬೇಕಾಗುವ ದಾಖಲೆಗಳು ಏನು ಹಾಗೂ ದೊರೆಯುವ ಹಣ ಎಷ್ಟು ಮತ್ತೆ ಅರ್ಜಿಯನ್ನು ಯಾವ ರೀತಿ ಸಲ್ಲಿಸಬೇಕೆಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಇದೆ.
ಅರ್ಜಿ ಸಲ್ಲಿಸಲು ಅರ್ಹತೆಗಳು ಏನು?
- ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ತಂದೆ ತಾಯಿ ಹೆಸರಿನಲ್ಲಿ ಜಮೀನನ್ನು ಹೊಂದಿರಬೇಕು.
- ಹಾಗೆ ಆ ಒಂದು ಅಭ್ಯರ್ಥಿಗಳು ಅಂದರೆ ತಂದೆ ತಾಯಿಗಳು ರೈತರು ಆಗಿರಬೇಕು.
- ಹಾಗೆ ವಿದ್ಯಾರ್ಥಿಯು ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು.
- ಆನಂತರ ವಿದ್ಯಾರ್ಥಿಗಳು 8ನೇ ತರಗತಿಯಿಂದ PG ವರೆಗೆ ವಿದ್ಯಾಭ್ಯಾಸ ಮಾಡುತ್ತಾ ಇರಬೇಕು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- STATS ಐಡಿ
- ರೇಷನ್ ಕಾರ್ಡ್
- ಪಹಣಿ ಪತ್ರ
- ಫಾರ್ಮರ್ಸ್ ಐಡಿ
- ಬ್ಯಾಂಕ್ ಖಾತೆ ವಿವರ
- ಕಾಲೇಜು ಶುಲ್ಕ ರಶೀದಿ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ದೊರೆಯುವ ಹಣ ಎಷ್ಟು?
- 8 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ 2,000 ದಿಂದ 2500 ರವರೆಗೆ ವಿದ್ಯಾರ್ಥಿ ವೇತನ.
- ಪಿಯುಸಿ, ಐಟಿಐ, ಡಿಪ್ಲೋಮಾ ವಿದ್ಯಾರ್ಥಿಗಳಿಗೆ 2500 ರಿಂದ 5000 ರವರೆಗೆ ವಿದ್ಯಾರ್ಥಿ ವೇತನ.
- ಡಿಗ್ರಿ ವಿದ್ಯಾರ್ಥಿಗಳಿಗೆ 5,000 ರಿಂದ 5,500 ರವರೆಗೆ ವಿದ್ಯಾರ್ಥಿ ವೇತನ.
- ಇಂಜಿನಿಯರಿಂಗ್ ಮತ್ತು ಮೆಡಿಕಲ್ ವಿದ್ಯಾರ್ಥಿಗಳಿಗೆ ರೂ.10,000 ದಿಂದ 11000 ಹಣ.
ಅರ್ಜಿ ಸಲ್ಲಿಸುವುದು ಹೇಗೆ?
- ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಲು SSP ಪೋರ್ಟಲ್ ಅಥವಾ ನಾವು ಈ ಕೆಳಗೆ ನೀಡಿರುವ ಅಧಿಕೃತ ವೆಬ್ ಸೈಟ್ ಗೆ ಭೇಟಿಯನ್ನು ನೀಡಿ.
- ಆನಂತರ ಅದರಲ್ಲಿ ಸ್ಟುಡೆಂಟ್ ಲಾಗಿನ್ ಅನ್ನು ಆಯ್ಕೆ ಮಾಡಿಕೊಂಡು. ಅದರಲ್ಲಿ ನಿಮ್ಮ ಲಾಗಿನ್ ಐಡಿಯನ್ನು ಹಾಕಿ ಲಾಗಿನ್ ಆಗಿ.
- ಆನಂತರದಲ್ಲಿ ಫಾರ್ಮರ್ ವೀವರ್ಸ್ ಐಡಿಯನ್ನು ಭರ್ತಿ ಮಾಡಿ.
- ಆನಂತರ ನೀವು ನಿಮ್ಮ ತಂದೆ ತಾಯಿಯವರ ರೈತ ಐಡಿಯನ್ನು ಅದರಲ್ಲಿ ಎಂಟರ್ ಮಾಡಿ.
- FID ವೆರಿಫಿಕೇಶನ್ ಆದ ಕೂಡಲೇ ಈ ಒಂದು ಸ್ಕಾಲರ್ಶಿಪ್ ಸ್ವಯಂ ಚಾಲಿತವಾಗಿ ಅರ್ಜಿ ಸಲ್ಲಿಕೆ ಆಗುತ್ತದೆ.
- ಆನಂತರ ಅದಕ್ಕೆ ಬೇಕಾಗುವ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ನೀವು ಭರ್ತಿ ಮಾಡಿದ ದಾಖಲೆಗಳು ಸರಿಯಾಗಿದ್ದರೆ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ.
LINK : Apply Now