HDFC Parivarthan Scholarship: 1 ರಿಂದ ಪದವಿವರೆಗೂ ಓದುತ್ತಿರುವ ವಿದ್ಯಾರ್ಥಿಗಳಿಗೆ 75,000 ವಿದ್ಯಾರ್ಥಿ ವೇತನ! ಈಗಲೇ ಅರ್ಜಿಯನ್ನು ಸಲ್ಲಿಕೆ ಮಾಡಿ.
ಇಂದಿನ ನಮ್ಮ ಜೀವನದಲ್ಲಿ ಈಗ ಶಿಕ್ಷಣವು ಕೇವಲ ಪುಸ್ತಕಗಳ ಹಿಡಿತವಲ್ಲ ಬದಲಿಗೆ ಈಗ ನಮ್ಮ ಭವಿಷ್ಯದ ಬಾಗಿಲು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆದರೆ ಸ್ನೇಹಿತರೆ ಈಗ ಹಣಕಾಸಿನ ಕೊರತೆಯಿಂದಾಗಿ ಅನೇಕ ಮಕ್ಕಳು ತಮ್ಮ ಕನಸುಗಳನ್ನು ಈಗ ಅರ್ಧದಲ್ಲಿಯೇ ಬಿಡುತ್ತಾ ಇದ್ದಾರೆ. ಇಂತಹ ಈ ಒಂದು ಸಂದರ್ಭದಲ್ಲಿ ಈಗ ನಮ್ಮ ಭಾರತದ ಅತಿ ದೊಡ್ಡ ಪ್ರೈವೇಟ್ ಬ್ಯಾಂಕ್ ಆದ ಎಚ್ ಡಿ ಎಫ್ ಸಿ ಬ್ಯಾಂಕ್ ನ ಮೂಲಕ ಈಗ ಈ ಒಂದು ಪರಿವರ್ತನ ECSS ಸ್ಕಾಲರ್ಶಿಪ್ ಯೋಜನೆ ಅಡಿಯಲ್ಲಿ ಈಗ ಈ ಒಂದು ಯೋಜನೆಯನ್ನು ಈಗ ಬಿಡುಗಡೆ ಮಾಡಿದ್ದು.

ಈ ಒಂದು ಯೋಜನೆ ಮೂಲಕ ಈಗ ನೀವು 1 ರಿಂದ 10ನೇ ತರಗತಿ ಹಾಗೂ ಸ್ನಾತಕೋತ್ತರ ಪದವಿ ಓದುತ್ತಿರುವ ಪ್ರತಿಯೊಬ್ಬರೂ ಕೂಡ ಈಗ ಅಂದರೆ ಆರ್ಥಿಕವಾಗಿ ದುರ್ಬಲ ವಿದ್ಯಾರ್ಥಿಗಳಿಗೆ ಈಗ 15,000 ದಿಂದ 75,000 ವರೆಗೆ ಆರ್ಥಿಕ ನೆರವನ್ನು ಪಡೆದುಕೊಳ್ಳಬಹುದು. ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು, ದಾಖಲೆಗಳು ಮತ್ತು ಅರ್ಜಿಯನ್ನು ಯಾವ ರೀತಿ ಸಲ್ಲಿಸಬೇಕೆಂಬುದರ ಸಂಪೂರ್ಣ ಮಾಹಿತಿ ಇದೆ.
ಸ್ಕಾಲರ್ ಶಿಪ್ ನ ಮಾಹಿತಿ
ಈಗ ಈ ಒಂದು HDFC ಬ್ಯಾಂಕ್ ಪರಿವರ್ತನ ಪ್ರೋಗ್ರಾಮ್ ಅಡಿಯಲ್ಲಿ ಈಗ ನಡೆಯುವಂತ ಈ ಒಂದು ಸ್ಕಾಲರ್ಶಿಪ್ ಯೋಜನೆ ಆರ್ಥಿಕವಾಗಿ ದುರ್ಬಲ ಮತ್ತು ಮೆರಿಟ್ ಹೊಂದಿರುವ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಆ ಒಂದು ಕುಟುಂಬದ ಸಂಕಷ್ಟಗಳಿಂದ ಅವರನ್ನು ಮುಕ್ತಗೊಳಿಸುವುದು. ಈ ಒಂದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಅದೇ ರೀತಿಯಾಗಿ ಶಿಕ್ಷಣದಲ್ಲಿ ಸಮಾನತೆಯನ್ನು ಉತ್ತೇಜಿಸಿ ದುರ್ಬಲ ವರ್ಗಗಳ ಮಕ್ಕಳನ್ನು ಸಬಲೀಕರಿಸುವುದು. ಈ ಒಂದು ಯೋಜನೆ ಮುಖ್ಯ ಉದ್ದೇಶ.
ಅರ್ಹತೆಗಳು ಏನು?
- ಈ ಒಂದು ವಿದ್ಯಾರ್ಥಿ ವೇತನವನ್ನು ಪಡೆಯುವ ಅಭ್ಯರ್ಥಿಗಳು ಭಾರತೀಯ ನಾಗರಿಕರು ಆಗಿರಬೇಕು.
- ಹಾಗೆ ಅವರು ಕಡ್ಡಯವಾಗಿ 1 ರಿಂದ 12ನೇ ತರಗತಿ ಹಾಗೂ ಡಿಪ್ಲೋಮಾ, ಐಟಿಐ, ಪಾಲಿಟೆಕ್ನಿಕ್ ಕೋರ್ಸ್ ಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಾ ಇರಬೇಕು.
- ಹಾಗೆ ಅವರ ವಾರ್ಷಿಕ ಆದಾಯ 2.5 ಲಕ್ಷಕ್ಕಿಂತ ಕಡಿಮೆ ಇರಬೇಕು.
- ಹಿಂದಿನ ವರ್ಷದಲ್ಲಿ ಕನಿಷ್ಠ 55% ಅಂಕಗಳನ್ನು ಪಡೆದಿರಬೇಕು.
ವಿದ್ಯಾರ್ಥಿ ವೇತನದ ಮೊತ್ತ ಎಷ್ಟು?
- 1 ರಿಂದ 6 ನೇ ತರಗತಿ ವಿದ್ಯಾರ್ಥಿಗಳಿಗೆ: 15,000
- 7 ರಿಂದ 12ನೇ ತರಗತಿ ಐ ಟಿ ಐ, ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ: 18000
- ಸಾಮಾನ್ಯ ಪದವಿ ವಿದ್ಯಾರ್ಥಿಗಳಿಗೆ: 30000
- ವೃತ್ತಿಪರ ಪದವಿ ವಿದ್ಯಾರ್ಥಿಗಳಿಗೆ: 50,000
- ಸಾಮಾನ್ಯ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ: 35,000
- ವೃತ್ತಿಪರ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ: 75,000
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಖಾತೆ ವಿವರ
- ಕಾಲೇಜು ಪ್ರವೇಶ ಪತ್ರ
- ಇಂದಿನ ವರ್ಷದ ಅಂಕ ಪಟ್ಟಿಗಳು
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ
ಅರ್ಜಿ ಸಲ್ಲಿಸುವುದು ಹೇಗೆ?
- ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ನಾವು ಈ ಕೆಳಗೆ ನೀಡಿರುವ ಅಧಿಕೃತ ವೆಬ್ ಸೈಟ್ ಗೆ ಮೊದಲು ಭೇಟಿಯನ್ನು ನೀಡಿ.
- ಆನಂತರ ಅದರಲ್ಲಿ HDFC Parivarthana ECSS ಸ್ಕಾಲರ್ಷಿಪ್ ಮೇಲೆ ಆಯ್ಕೆ ಮಾಡಿ.
- ಆನಂತರ ಅದರಲ್ಲಿ ನೀವು ನಿಮ್ಮ ಮೊಬೈಲ್ ನಂಬರ್ ಅನ್ನು ಎಂಟರ್ ಮಾಡಿ ಖಾತೆಯನ್ನು ತೆರೆಯಿರಿ. ಒಂದು ವೇಳೆ ಈಗಾಗಲೇ ಖಾತೆಯನ್ನು ಹೊಂದಿದ್ದರೆ ಲಾಗಿನ್ ಮಾಡಿಕೊಳ್ಳಿ.
- ಅನಂತರ ಅದರಲ್ಲಿ ನಿಮ್ಮ ವೈಯಕ್ತಿಕ ಹಾಗೂ ಶೈಕ್ಷಣಿಕ ದಾಖಲೆಗಳನ್ನು ಅಪ್ಲೈ ಮಾಡಿ.
- ಹಾಗೆ ಅದಕ್ಕೆ ಬೇಕಾಗುವ ಕೆಲವೊಂದು ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಅಪ್ಲೋಡ್ ಮಾಡಿ.
- ನೀವು ಭರ್ತಿ ಮಾಡಿದ ದಾಖಲೆಗಳು ಸರಿಯಾಗಿದ್ದರೆ Submit ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.
LINK : Apply Now