Anganavadi Requerment: ಅಂಗನವಾಡಿ ಇಲಾಖೆಯಲ್ಲಿ ಭರ್ಜರಿ ನೇಮಕಾತಿ! 1,787 ಹುದ್ದೆಗಳ ನೇಮಕಾತಿ ಪ್ರಾರಂಭ!
ಈಗ ನಮ್ಮ ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ನಿರುದ್ಯೋಗಿ ಮಹಿಳೆಯರಿಗೆ ಈಗ ಮತ್ತೊಂದು ಉದ್ಯೋಗ ಅವಕಾಶವನ್ನು ನೀಡಿದ್ದು. ಈಗ ನಮ್ಮ ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವಂತಹ ಒಟ್ಟು 1,787 ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿ ಹುದ್ದೆಗಳಿಗೆ ಈಗ ಭರ್ತಿ ಮಾಡಿಕೊಳ್ಳಲು ಅಧಿಕೃತವಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು. ನೀವು ಕೂಡ ಅರ್ಜಿಯನ್ನು ಸಲ್ಲಿಸಿ.

ಈಗ ಸ್ನೇಹಿತರೆ ಈಗ ನೀವೇನಾದ್ರೂ ಈ ಒಂದು ಅಂಗನವಾಡಿ ಅಲ್ಲಿ ಖಾಲಿ ಇರುವಂತ ಹುದ್ದೆಗಳಿಗೆ ಅರ್ಹತೆಯನ್ನು ಪಡೆದುಕೊಂಡಿದ್ದರೆ ಈ ಕೂಡಲೇ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಈಗ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಲು ಅರ್ಹ ಮತ್ತು ಆಸಕ್ತಿ ಇರುವಂತಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ ಮತ್ತು ಬೇಕಾಗುವ ದಾಖಲೆಗಳು ಏನು ಹಾಗೂ ಯಾವ ರೀತಿ ಅರ್ಜಿ ಸಲ್ಲಿಕೆ ಮಾಡಬೇಕೆಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಹುದ್ದೆಯ ವಿವರ
ಈ ಒಂದು ಹುದ್ದೆಗಳನ್ನು ಕರೆದಿರುವಂತೆ ಇಲಾಖೆ ಹೆಸರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಈಗ ಈ ಒಂದು ಇಲಾಖೆಯಲ್ಲಿ ಸುಮಾರು 1,787 ಹುದ್ದೆಗಳು ಖಾಲಿ ಇದ್ದು. ಖಾಲಿ ಇರುವ ಹುದ್ದೆಗಳ ಹೆಸರುಗಳು ಎಂದರೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಾಯಕ್ಕೆ ಹುದ್ದೆಗಳು ಖಾಲಿ ಇವೆ. ಅದೇ ರೀತಿಯಾಗಿ ನಮ್ಮ ರಾಯಚೂರು, ಉತ್ತರ ಕನ್ನಡ ಮೈಸೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಈ ಒಂದು ಹುದ್ದೆಗಳನ್ನು ಕರೆಯಲಾಗಿದೆ,
ಶೈಕ್ಷಣಿಕ ಅರ್ಹತೆ ಏನು?
ಈಗ ಈ ಒಂದು ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡುವಂತಹ ಮಹಿಳೆಯರು ಕಡ್ಡಾಯವಾಗಿ ಪಿಯುಸಿಯನ್ನು ಪಾಸಾಗಿರಬೇಕು.
ಆನಂತರ ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡುವಂತಹ ಮಹಿಳೆಯರು ಕನಿಷ್ಠ 10ನೇ ತರಗತಿಯನ್ನು ಕಡ್ಡಾಯವಾಗಿ ಪಾಸಾಗಿರಬೇಕು.
ವಯೋಮಿತಿ ಏನು?
ಈಗ ಈ ಒಂದು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡುವಂತ ಅರ್ಹ ಮಹಿಳೆಯರು ಕಡ್ಡಾಯವಾಗಿ ಈಗ 19 ವರ್ಷದಿಂದ 35 ವರ್ಷದ ಒಳಗೆ ಇರಬೇಕಾಗುತ್ತದೆ.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಶೈಕ್ಷಣಿಕ ಪ್ರಮಾಣ ಪತ್ರಗಳು
- ವಾಸ ಸ್ಥಳದ ದೃಢೀಕರಣ ಪತ್ರ
- ಗುರುತಿನ ಚೀಟಿ
- ಬ್ಯಾಂಕ್ ಖಾತೆಗೆ ವಿವರ
- ಮೊಬೈಲ್ ನಂಬರ್
ಅರ್ಜಿ ಸಲ್ಲಿಸುವುದು ಹೇಗೆ?
- ಈಗ ನಾವು ಮೊದಲು ಈ ಕೆಳಗೆ ನೀಡಿರುವ ಇಲಾಖೆ ಅಧಿಕೃತ ವೆಬ್ಸೈಟ್ಗೆ ಮೊದಲು ಭೇಟಿಯನ್ನು ನೀಡಿ.
- ಆನಂತರ ಅದರಲ್ಲಿ ನೀವು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ನೇಮಕಾತಿ ಲಿಂಕ್ ಮೇಲೆ ಕ್ಲಿಕ್ ಮಾಡಿ ಮುಂದುವರೆಯಿರಿ.
- ಆನಂತರ ನೀವು ನಿಮ್ಮ ಜಿಲ್ಲೆಯ ತಾಲೂಕು ಮತ್ತು ಅರ್ಜಿ ಸಲ್ಲಿಸುತ್ತಿರುವ ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
- ಅನಂತರ ಅದಕ್ಕೆ ಬೇಕಾಗುವ ಪ್ರತಿಯೊಂದು ದಾಖಲೆಗಳನ್ನು ಸರಿಯಾಗಿ ಭರ್ತಿ ಮಾಡಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಕೆ ಮಾಡಿ.
LINK : Apply Now
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30.12.2025