Basava Vasati Yojane: ರಾಜ್ಯದ ಬಡ ಕುಟುಂಬಗಳಿಗೆ ಉಚಿತ ಮನೆಯನ್ನು ಪಡೆಯಲು ಅರ್ಜಿ ಸಲ್ಲಿಕೆ ಪ್ರಾರಂಭ! ಈಗಲೇ ಅರ್ಜಿ ಸಲ್ಲಿಸಿ.
ಈಗ ನಮ್ಮ ಕರ್ನಾಟಕದಲ್ಲಿ ವಾಸಿಸುವಂತಹ ಬಡ ಕುಟುಂಬಗಳು ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಈಗ ಸರ್ಕಾರದಿಂದ ಉಚಿತ ಮನೆ ಯೋಜನೆಗಳನ್ನು ಈಗ ನೀಡಲಾಗುತ್ತಿದೆ. ಈಗ ನೀವು ಕೂಡ ಅರ್ಹರಿದ್ದರೆ ಕೂಡಲೇ ಈ ಒಂದು ಯೋಜನೆಗಳ ಮೂಲಕ ಉಚಿತ ಮನೆಯನ್ನು ನೀವು ಪಡೆದುಕೊಳ್ಳಬಹುದು.

ಅಷ್ಟೇ ಅಲ್ಲದೆ ಈಗ ಬಸವ ವಸತಿ ಯೋಜನೆ, ರಾಜೀವ್ ಗಾಂಧಿ ವಸತಿ ಯೋಜನೆ ಮತ್ತು ಆಶ್ರಯ ವಸತಿ ಯೋಜನೆಗಳ ಮೂಲಕ ಈಗ ನಮ್ಮ ರಾಜ್ಯ ಸರ್ಕಾರವು ಮನೆ ಇಲ್ಲದವರಿಗೆ ಸ್ವಂತ ಮನೆಯ ನಿರ್ಮಾಣ ಮಾಡಿಕೊಳ್ಳಲು ಈಗ ಸರ್ಕಾರವು ಸಹಾಯವನ್ನು ಮಾಡುತ್ತಾ ಇದೆ. ಅದೇ ರೀತಿಯಾಗಿ ಈ ಒಂದು ಯೋಜನೆಗಳು ರಾಜೀವ್ ಗಾಂಧಿ ಗ್ರಾಮೀಣ ಮನೆ ನಿರ್ಮಾಣ ನಿಗಮದ ಮೂಲಕ ನಡೆಯುತ್ತಾ ಇದೆ.
ಹಾಗಿದ್ರೆ ಸ್ನೇಹಿತರೆ ಈಗ ನೀವು ಕೂಡ ಈ ಒಂದು ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಉಚಿತ ಮನೆಯನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ. ಏಕೆಂದರೆ ನಾವು ಇದರಲ್ಲಿ ಅರ್ಜಿ ಸಲ್ಲಿಸಲು ಅರ್ಹತೆಗಳು ಏನು? ದಾಖಲೆಗಳು ಏನು ಮತ್ತು ಅರ್ಜಿ ಪ್ರಕ್ರಿಯೆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡುತ್ತಾ ಇದ್ದೇವೆ.
ಯೋಜನೆಯ ಉದ್ದೇಶ ಮತ್ತು ಪ್ರಯೋಜನ ಏನು?
ಈಗ ಈ ಒಂದು ಬಸವ ವಸತಿ ಯೋಜನೆ ಆರ್ಥಿಕವಾಗಿ ದುರ್ಬಲ ವರ್ಗಗಳ SC/ST, OBC ಮತ್ತು ಅಲ್ಪಸಂಖ್ಯಾತರಿಗೆ ಉಚಿತ ಅಥವಾ ಸಬ್ಸಿಡಿ ಮನೆಗಳನ್ನು ನೀಡುವುದು. ಈ ಒಂದು ಯೋಜನೆ ಮುಖ್ಯ ಗುರಿ ಆಗಿದೆ. ಇದರಿಂದಾಗಿ ಈಗ ಗ್ರಾಮೀಣ ಮತ್ತು ನಗರ ಭಾಗದಲ್ಲಿ ಮನೆ ಇಲ್ಲದವರಿಗೆ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳಲು ಸಹಾಯವನ್ನು ಮಾಡಲಾಗುತ್ತದೆ.
ಅಷ್ಟೇ ಅಲ್ಲದೆ ಈಗ ಈ ಒಂದು ಯೋಜನೆ ಅಡಿಯಲ್ಲಿ 1.5 ಲಕ್ಷದವರೆಗೆ ಈಗ ಮನೆ ನಿರ್ಮಾಣ ಮಾಡಿಕೊಳ್ಳಲು ಸಹಾಯವನ್ನು ಪಡೆದುಕೊಳ್ಳಬಹುದು. ಹಾಗೆ ಈಗ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಈಗ ನೀವು 2.5 ಲಕ್ಷದವರೆಗೆ ಸಬ್ಸಿಡಿಯನ್ನು ಪಡೆದುಕೊಂಡು ಇದರ ಮೂಲಕ ಈಗ ನೀವು ಸಾಲವನ್ನು ಕೂಡ ಪಡೆದುಕೊಳ್ಳಬಹುದು.
ಅರ್ಹತೆಗಳು ಏನು?
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
- ಹಾಗೆ ಅವರ ವಾರ್ಷಿಕ ಆದಾಯ 1.20 ಲಕ್ಷಕ್ಕಿಂತ ಕಡಿಮೆ ಇರಬೇಕು.
- ಹಾಗೆ ಅವರು ಈ ಹಿಂದೆ ಸ್ವಂತ ಮನೆಯನ್ನು ಹೊಂದಿರಬಾರದು.
- ಹಾಗೆ ಅವರ ಕುಟುಂಬದಲ್ಲಿ ಯಾರು ಕೂಡ ಸರ್ಕಾರಿ ಉದ್ಯೋಗವನ್ನು ಹೊಂದಿರಬಾರದು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಮೊಬೈಲ್ ನಂಬರ್
- ಬ್ಯಾಂಕ್ ಖಾತೆ ವಿವರ
- ಮೊಬೈಲ್ ನಂಬರ್
- ರೇಷನ್ ಕಾರ್ಡ್
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
- ನಿವಾಸದ ಪ್ರಮಾಣ
ಅರ್ಜಿ ಸಲ್ಲಿಸುವುದು ಹೇಗೆ?
- ಈಗ ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ನಾವು ಈ ಕೆಳಗೆ ನೀಡಿರುವ ಅಧಿಕೃತ ವೆಬ್ ಸೈಟ್ ಗೆ ಮೊದಲು ನೀವು ಭೇಟಿಯನ್ನು ನೀಡಬೇಕಾಗುತ್ತದೆ.
- ಆನಂತರದಲ್ಲಿ ನಿಮಗೆ ಬೇಕಾದ ಭಾಷೆಯನ್ನು ನೀವು ಆಯ್ಕೆ ಮಾಡಿಕೊಂಡು ಅದರಲ್ಲಿ ಬಸವ ವಸತಿ ಯೋಜನೆ ಅಥವಾ ರಾಜೀವ್ ಗಾಂಧಿ ವಸತಿ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಿ.
- ಆನಂತರ ಅದರಲ್ಲಿ ಕೇಳುವಂತಹ ನಿಮ್ಮ ವೈಯಕ್ತಿಕ ದಾಖಲೆಗಳು ಅಂದರೆ ಆದಾಯ ಆಸ್ತಿಯ ಸ್ಥಿತಿ ಬಗ್ಗೆ ನೀವು ಸಂಪೂರ್ಣ ಮಾಹಿತಿಯನ್ನು ನೀಡಿ.
- ಆನಂತರ ನೀವು ಅದರಲ್ಲಿ ಬೇಕಾಗುವ ಕೆಲವೊಂದಷ್ಟು ದಾಖಲೆಗಳನ್ನು ಅಪ್ಲೋಡ್ ಮಾಡಿ.
- ನೀವು ಭರ್ತಿ ಮಾಡಿದ ದಾಖಲೆಗಳು ಸರಿಯಾಗಿದ್ದರೆ Submit ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ.
LINK : Apply Now