Bele Parihara Amount Status Check: ಬೆಳೆ ಪರಿಹಾರದ ಹಣ ಜಮಾ! ಈ ರೀತಿಯಾಗಿ ಸ್ಟೇಟಸ್ ಚೆಕ್ ಮಾಡಿಕೊಳ್ಳಿ?
ಈಗ ಸ್ನೇಹಿತರೆ ನಿಮಗೆ ತಿಳಿದಿರುವಂತೆ ನಮ್ಮ ರಾಜ್ಯದಲ್ಲಿ ಆಗಿರುವ ಆಕಾಲಿಕ ಮಳೆ ಪ್ರವಾಹ ಅಥವಾ ಬರಗಾಲದಿಂದ ಕಷ್ಟಪಟ್ಟು ಬೆಳೆದ ಬೆಳೆಗಳು ಎಲ್ಲ ಹಾಳಾಗಿದ್ದು. ಈಗ ಪ್ರತಿಯೊಬ್ಬ ರೈತರು ಕೂಡ ಸಂಕಷ್ಟಕ್ಕೆ ಇಡಾಗಿದ್ದಾರೆ. ಆದರೆ ಈಗ ನಿಮ್ಮ ಸಂಕಷ್ಟಕ್ಕೆ ನೆರವಾಗುವ ಉದ್ದೇಶದಿಂದ ಸರ್ಕಾರವು ಬೆಳೆ ಹಾನಿ ಪರಿಹಾರವನ್ನು ನೀಡುತ್ತಾ ಇದ್ದು. ಅದೇ ರೀತಿಯಾಗಿ ಈಗಾಗಲೇ 2025 26 ನೇ ಸಾಲಿನ ನವೆಂಬರ್ ತಿಂಗಳಲ್ಲಿ ಈಗ ರೈತರ ಖಾತೆಗಳಿಗೆ ನೇರವಾಗಿ ಜಮಾ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ.

ಅದೇ ರೀತಿಯಾಗಿ ಈಗಾಗಲೇ ನಿಮ್ಮ ಊರಿನಲ್ಲಿ ಕೆಲವೊಂದು ರೈತರಿಗೆ ಹಣ ಜಮಾ ಆಗಿರಬಹುದು. ಈಗ ನಿಮಗೆ ಇನ್ನು ಜಮಾ ಆಗಿಲ್ಲವೇ ಆಗಿದ್ದರೆ ನಿಮ್ಮ ಖಾತೆಗೆ ಹಣ ಜಮಾ ಆಗಿದೆ ಇಲ್ಲವಾ ಅಥವಾ ಯಾವ ಹಂತದಲ್ಲಿ ಇದೆ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಏನಿದು ಬೆಳೆ ಪರಿಹಾರ ಮಾಹಿತಿ
ಈಗ ಯಾವೆಲ್ಲ ರೈತರ ಬೆಳೆಗಳು ಈಗ ಪ್ರಕೃತಿ ವಿಕೋಪಗಳಾದ ಬರಗಾಲ,, ರೋಗ ಬಾಧೆಗಳಿಂದ ಬೆಳೆ ನಾಶವಾಗಿದೆಯೋ ಅಂತ ರೈತರು ಸಾಲದ ಸುಳಿಗೆ ಸಿಕ್ಕಬಾರದು ಎಂಬ ಉದ್ದೇಶದಿಂದ ಸರಕಾರವು ನೀಡುವಂತಹ ಆರ್ಥಿಕ ಸಹಾಯ ಈ ಒಂದು ಬೆಳೆ ಪರಿಹಾರವಾಗಿದೆ. ಈ ಒಂದು ಹಣವನ್ನು ನೇರವಾಗಿ ರೈತರ ಖಾತೆಗಳಿಗೆ DBT ಮೂಲಕ ಜಮಾ ಮಾಡಲಾಗುತ್ತದೆ.
ಹಣದ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
- ಈಗ ನೀವು ಕೂಡ ಈ ಒಂದು ಹಣದ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬೇಕೆಂದರೆ ನಾವು ಈ ಕೆಳಗೆ ನೀಡಿರುವ ಅಧಿಕೃತ ವೆಬ್ ಸೈಟ್ ಗೆ ಭೇಟಿಯನ್ನು ನೀಡಬೇಕಾಗುತ್ತದೆ.
- ಆನಂತರ ಅದರಲ್ಲಿ ನೀವು ನಿಮ್ಮ ವರ್ಷ ಋತುಗಳನ್ನು ಆಯ್ಕೆ ಮಾಡಿಕೊಂಡು ಮತ್ತು ಯಾವ ಬೆಳೆ ಹಾಳಾಗಿದೆ ಎಂಬುದನ್ನು ಸೆಲೆಕ್ಟ್ ಮಾಡಿಕೊಳ್ಳಿ.
- ಆನಂತರ ಆದರೆ ನಿಮಗೆ ಮೊಬೈಲ್ ನಂಬರ್, ಆಧಾರ್ ಸಂಖ್ಯೆ, ಫ್ರೂಟ್ಸ್ ಐಡಿ ಅಥವಾ ಸರ್ವೇ ನಂಬರ್ ಇದರಲ್ಲಿ ನಿಮಗೆ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಂಡು ಮುಂದುವರೆಯಿರಿ.
- ತದನಂತರ ನೀವು ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ ಮತ್ತು ಗ್ರಾಮವನ್ನು ಆಯ್ಕೆ ಮಾಡಿಕೊಂಡು ಡೀಟೇಲ್ಸ್ ಮೇಲೆ ಕ್ಲಿಕ್ ಮಾಡಿ ಮುಂದುವರೆಯಿರಿ.,
- ಆನಂತರ ನೀವು ನಿಮ್ಮ ಹಣ ಯಾವ ಹಂತದಲ್ಲಿ ಇದೆ ಅಥವಾ ಜಮಾ ಆಗಿದೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಗಳನ್ನು ಈಗ ನೀವು ಅದರಲ್ಲಿ ಪಡೆದುಕೊಳ್ಳಬಹುದು.
LINK : Apply Now