Digital E Asstes Distribuation For Gram Panchayta: ಈಗ ಗ್ರಾಮ ಪಂಚಾಯತಿ ಎಲ್ಲಾ ಆಸ್ತಿಗಳಿಗೆ ಡಿಜಿಟಲ್ ಆಸ್ತಿ ಪ್ರಮಾಣ ಪತ್ರ ವಿತರಣೆ!
ಈಗ ರಾಜ್ಯ ಸರ್ಕಾರವು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವಂತಹ ಎಲ್ಲಾ ಆಸ್ತಿಗಳಿಗೆ ಈ ಸ್ವತ್ತು ಪ್ರಮಾಣ ಪತ್ರ ವಿತರಣೆಗೆ ಮುಂದಾಗಿದೆ. ಈಗ ಸ್ನೇಹಿತರೆ ಇದಕ್ಕಾಗಿ ಸರ್ಕಾರ ಹೊಸ ನಿಯಮಗಳನ್ನು ಅಂತಿಮಗೊಳಿಸಿದ್ದು. ಈಗ ಈ ಒಂದು ಮಹತ್ವದ ಯೋಜನೆಗೆ ಸಂಬಂಧಿಸಿ ದಂತಹ ಸಂಪೂರ್ಣವಾದ ಮಾಹಿತಿ ಈ ಒಂದು ಲೇಖನದಲ್ಲಿ ಇದೆ.
ಈಗ ನಮ್ಮ ರಾಜ್ಯದಂತ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವಂಥ ಪ್ರತಿಯೊಂದು ಆಸ್ತಿಗಳಿಗೂ ಕೂಡ ಈಗ ಈ ಸ್ವತ್ತು ವಿತರಿಸಲು ಸರ್ಕಾರವು ನೀಡುವ ತೀರ್ಮಾನವನ್ನು ತೆಗೆದುಕೊಂಡಿದೆ. ಈಗ ದೀಪಾವಳಿ ಹಬ್ಬದ ಬಳಿಕ ಗ್ರಾಮೀಣ ಭಾಗದ ಪ್ರತಿ ಮನೆ ನಿವೇಶನ ಮತ್ತು ವಾಣಿಜ್ಯ ಕಟ್ಟಡಕ್ಕೂ ಕೂಡ ಈಗ ಡಿಜಿಟಲ್ ಆಸ್ತಿ ಪ್ರಮಾಣ ಪತ್ರವನ್ನು ನೀಡುವ ಕಾರ್ಯಕ್ರಮವನ್ನು ಈಗ ಪ್ರಾರಂಭ ಮಾಡಲು ಸರ್ಕಾರವು ತೀರ್ಮಾನವನ್ನು ತೆಗೆದುಕೊಂಡಿದೆ.
ಹಾಗೆ ಈಗ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರಚನೆ ಮಾಡಿರುವಂತಹ ನೂತನ ಈ ಸ್ವತ್ತು ನಿಯಮಾವಳಿಗಳು ಪ್ರಸ್ತುತ ಸಚಿವಾಲಯದ ಅನುಮೋದನೆಯು ಈಗ ಅಂತಿಮ ಹಂತದಲ್ಲಿ ಇದೆ. ಇನ್ನೂ ಕೆಲವೇ ದಿನಗಳಲ್ಲಿ ಅಂದರೆ ಶೀಘ್ರದಲ್ಲಿ ಜಾರಿಗೆ ಮಾಡುವ ಸಾಧ್ಯತೆ ಇದೆ ಎಂದು ಈಗ ಸರ್ಕಾರ ಮಾಹಿತಿ ನೀಡಿದೆ.
ಕಾನೂನಾತ್ಮಕ ದಾಖಲೆಗಳ ಮಾಹಿತಿ
ಈಗ ಗ್ರಾಮೀಣ ಪ್ರದೇಶಗಳಲ್ಲಿ ಇರುವಂತಹ ಆಸ್ತಿ ಖರೀದಿಸಿದರು ದಾಖಲೆಗಳ ಸೃಷ್ಟಿಯಾಗದೆ ಸಾಮಾನ್ಯ ಸಮಸ್ಯೆ ಆಗುತ್ತಾ ಇತ್ತು. ಈಗ ಈ ಒಂದು ಈ ಖಾತೆ ಇಲ್ಲದ ಕಾರಣ ಮನೆಯಲ್ಲಿ ನಿರ್ಮಾಣಕ್ಕೆ ಅನುಮತಿ ಆಗಿರಬಹುದು ಅಥವಾ ಬ್ಯಾಂಕ್ ಸಾಲ ಪಡೆಯುವುದು ಇಲ್ಲವೇ ಆಸ್ತಿ ಮಾರಾಟದಂತಹ ಪ್ರಮುಖ ವೈವಾಟುಗಳಿಗೆ ಈಗ ತೊಂದರೆಯಾಗುತ್ತದೆ.
ಈಗ ಸರ್ಕಾರ ಈ ಒಂದು ಎಲ್ಲಾ ಸಮಸ್ಯೆಗಳಿಗೆ ಈಗ ಅಂತ್ಯ ಹಾಡುವ ಸಮಯ ಬಂದಿದೆ. ಈಗ ಈ ಒಂದು ಈ ಸ್ವತ್ತು ಪ್ರಮಾಣ ಪತ್ರ ವಿತರಣೆ ಬಳಿಕ ಈಗ ಪ್ರತಿಯೊಂದು ಆಸ್ತಿಯೂ ಕೂಡ ಕಾನೂನಾತ್ಮಕ ಮಾನ್ಯತೆ ಪಡೆದ ದಾಖಲೆಗಳನ್ನು ಹೊಂದಿರುತ್ತದೆ. ಇನ್ನು ಮುಂದೆ ನೋಂದಣಿ ಕಚೇರಿಯಲ್ಲಿ ಆಸ್ತಿ ವ್ಯವಹಾರ ಮಾಡುವಂತ ಸಮಯದಲ್ಲಿ ಈ ಸ್ವತ್ತು ದಾಖಲೆಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕಾಗುತ್ತದೆ.
ರಾಜ್ಯದಲ್ಲಿ 1.45 ಕೋಟಿ ಆಸ್ತಿ ಡಿಜಿಟಲ್ ಮಾಡಿದೆ
ಈಗ ರಾಜ್ಯಾದ್ಯಂತ ಸುಮಾರು 1.45 ಕೋಟಿಗಳಿಗೂ ಕೂಡ ಹೆಚ್ಚು ಆಸ್ತಿಗಳು ಈಗ ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿವೆ ಎಂಬ ಮಾಹಿತಿಯನ್ನು ನೀಡಲಾಗಿದೆ. ಈಗ ಈ ಒಂದು ಎಲ್ಲಾ ಆಸ್ತಿಗಳಿಗೂ ಕೂಡ ಹಂತ ಹಂತವಾಗಿ ಈ ಸ್ವತ್ತು ಪೋರ್ಟಲ್ಲಿ ದಾಖಲೀಕರಣವನ್ನು ಮಾಡುವಂತಹ ಪ್ರಕ್ರಿಯೆಗೆ ನಡೆಯಲಿದೆ.
ಅದೇ ರೀತಿಯಾಗಿ ಈ ಒಂದು ಯೋಜನೆಯ ಯಶಸ್ವಿಯಾಗಿ ಅನುಷ್ಠಾನದಿಂದಾಗಿ ಪ್ರತಿಯೊಂದು ಮನೆ ಮತ್ತು ನಿವೇಶನದ ಡಿಜಿಟಲ್ ದಾಖಲೆಗಳು ದೊರೆಯುತ್ತವೆ. ಇದರಿಂದಾಗಿ ಈಗ ನೀವು ಸಾಲ ಪಡೆಯುವುದಾಗಿರಬಹುದು ಅಥವಾ ನಿರ್ಮಾಣ ಪರವಾನಿಗೆ ಪ್ರಕ್ರಿಯೆಗಳು ಈಗ ಆನ್ಲೈನ್ ಮೂಲಕ ಸುಲಭವಾಗುತ್ತದೆ.
ಕಾನೂನು ತಿದ್ದುಪಡಿಗಳು ಏನು?
ಈಗ ಈ ಸ್ವತ್ತು ವಿತರಣಾ ಪ್ರಕ್ರಿಯೆಯು ಕಾನೂನಾತ್ಮಕವಾಗಿ ಬಲ ನೀಡಲು ಈಗ ವಿಧಾನ ಮಂಡಲ ಅಧಿವೇಶನದಲ್ಲಿ ಪಂಚಾಯತ್ ರಾಜ್ ಕಾಯ್ದೆಯ 199 (ಬಿ) ನಿಯಮ ಅಡಿಯಲ್ಲಿ ಅಗತ್ಯ ತಿದ್ದುಪಡಿಗಳನ್ನು ಈಗ ತರಲಾಗಿದೆ. ಈಗ ಈ ಒಂದು ತಿದ್ದುಪಡಿಗಳಿಂದ ಗ್ರಾಮ ಪಂಚಾಯತಿಗಳಲ್ಲಿ ಆಸ್ತಿ ದಾಖಲೆಯ ನಿರ್ವಹಣೆ ಅಧಿಕಾರ ಸಿಕ್ಕಿದೆ. ಈಗ ಈ ಸ್ವತ್ತು ವಿತರಣೆಗೆ ಇದ್ದ ಕಾನೂನುಗಳು ಈಗ ನಿವಾರಣೆಯಾಗಿವೆ. ಈಗ ಹೊಸ ನಿಯಮಗಳು ಜಾರಿಗೆ ಆದ ನಂತರ ಈ ಸ್ವತ್ತು ಪ್ರಮಾಣ ಪತ್ರಗಳನ್ನು ನೀಡಲಾಗುತ್ತದೆ.
ಹಾಗೆಯೇ ಗ್ರಾಮೀಣ ಅಭಿವೃದ್ಧಿ ಮತ್ತು ಕಂದಾಯ ಹಾಗೂ ಕಾನೂನು ಇಲಾಖೆಗಳು ಕಳೆದ ಮೂರು ತಿಂಗಳಿನಿಂದ ನಿರಂತರವಾಗಿ ಈಗ ಕೆಲಸ ನಿರ್ವಹಣೆಯನ್ನು ಮಾಡುತ್ತ ಇದೆ. ಈಗ ಸರ್ವರ್ ಮತ್ತು ಸಾಫ್ಟ್ವೇರ್ ವೇದಿಕೆ ಸಿದ್ಧವಾಗುತ್ತಿದ್ದು. ಈಗ ದೀಪಾವಳಿಯ ನಂತರ ಎರಡು ತಿಂಗಳಲ್ಲಿ ಈ ಸ್ವತ್ತು ಪ್ರಮಾಣ ವಿತರಣೆ ಪ್ರಾರಂಭವಾಗುವ ನಿರೀಕ್ಷೆ ಇದೆ ಎಂದು ಈಗ ಸರ್ಕಾರ ಮಾಹಿತಿ ನೀಡಿದೆ. ಈ ರೀತಿಯಾಗಿ ದೀಪಾವಳಿ ನಂತರ ಪ್ರತಿಯೊಂದು ಆಸ್ತಿಗಳಿಗೂ ಕೂಡ ಈಗ ಈ ಸ್ವತ್ತು ದಾಖಲೆಗಳನ್ನು ಈಗ ವಿತರಣೆ ಮಾಡಲಾಗುತ್ತದೆ.