E Swattu Scheme For Rural People In Karnataka: ಗ್ರಾಮೀಣ ಜನತೆಗೆ ಈ ಸ್ವತ್ತು ಯೋಜನೆ! ಡಿಜಿಟಲ್ ಆಡಳಿತದ ಮತ್ತೊಂದು ಹೊಸ ಯುಗ! ಇಲ್ಲಿದೆ ನೋಡಿ ಮಾಹಿತಿ.
ಈಗ ಕರ್ನಾಟಕದ ಗ್ರಾಮೀಣ ಆಡಳಿತವನ್ನು ಆಧುನಿಕರಣ ಗೊಳಿಸುವ ಉದ್ದೇಶದಿಂದಾಗಿ ಈಗ ರಾಜ್ಯ ಸರ್ಕಾರವು ಈ ಸ್ವತ್ತು ಯೋಜನೆಗೆ ಚಾಲನೆಯನ್ನು ನೀಡಿದೆ. ಈ ಒಂದು ಯೋಜನೆಯ ಮೂಲಕ ಈಗ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಆಸ್ತಿಗಳಿಗೆ ಡಿಜಿಟಲ್ ಪ್ರಮಾಣ ಪತ್ರಗಳನ್ನು ವಿತರಿಸುವಂತಹ ವ್ಯವಸ್ಥೆಯನ್ನು ಜಾರಿಗೆ ಮಾಡಲಾಗಿದೆ.

ಹಾಗೆ ಈ ಒಂದು ಕ್ರಮವು ಗ್ರಾಮೀಣ ಜನತೆಗೆ ಪಾರದರ್ಶಕ ಮತ್ತು ತ್ವರಿತ ಹಾಗೂ ಸುಲಭ ಸೇವೆಗಳನ್ನು ಒದಗಿಸುವಂತಹ ಗುರಿಯನ್ನು ಹೊಂದಿದ್ದು. ಈಗಾಗಲೇ ನಮ್ಮ ರಾಜ್ಯದ ಗ್ರಾಮೀಣ ಅಭಿವೃದ್ಧಿಯನ್ನು ಮತ್ತಷ್ಟು ವೇಗವಾಗಿ ಮುನ್ನಡೆಸಿಕೊಂಡು ಹೋಗಲು ಸಹಾಯ ಮಾಡುತ್ತದೆ.
ಈ ಸ್ವತ್ತು ಯೋಜನೆಯ ಮಾಹಿತಿ
ರಾಜ್ಯ ಸರ್ಕಾರವು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಕ್ಕೆ ತಿದ್ದುಪಡಿಯನ್ನು ತಂದಿದ್ದು. ಈಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳಿಗೆ ಡಿಜಿಟಲ್ ದಾಖಲೆಗಳನ್ನು ಒದಗಿಸುವಂತಹ ಈ ಸ್ವತ್ತು ಯೋಜನೆಯನ್ನು ಈಗ ಬಿಡುಗಡೆ ಮಾಡಿದೆ.
ಈಗ ಈ ಒಂದು ಯೋಜನೆ ಅಡಿಯಲ್ಲಿ ರಾಜ್ಯದ 95.75 ಲಕ್ಷಕ್ಕೂ ಅಧಿಕ ಆಸ್ತಿಗಳಿಗೆ ಈಗ ಡಿಜಿಟಲ್ ಪ್ರಮಾಣ ಪತ್ರಗಳನ್ನು ನೀಡಲಾಗುತ್ತದೆ. ಈಗ ಈ ಒಂದು ಕ್ರಮವು ಗ್ರಾಮೀಣ ಜನರಿಗೆ ಆಸ್ತಿ ಸಂಬಂಧಿಸಿದ ಸೇವೆಗಳನ್ನು ಆನ್ಲೈನ್ ಮೂಲಕ ಸುಲಭವಾಗಿ ಪಡೆಯಲು ಇದು ಅನುಕೂಲ ಮಾಡಿಕೊಡುತ್ತದೆ.
ಈ ಸ್ವತ್ತು ಯೋಜನೆಯ ಪ್ರಯೋಜನಗಳು
- ಈಗ ಗ್ರಾಮೀಣ ಆಸ್ತಿಗಳಿಗೆ ಸಂಬಂಧಿಸಿದಂತ ನಿರಾಕ್ಷೇಪನ ಪತ್ರಗಳ ಡಿಜಿಟಲ್ ರೂಪದಲ್ಲಿ ತ್ವರಿತವಾಗಿ ಪಡೆಯಬಹುದು.
- ತೆರಿಗೆ ಲೆಕ್ಕಾಚಾರವನ್ನು ವೈಜ್ಞಾನಿಕವಾಗಿ ಸರಳ ಮಾಡಲಾಗಿದ್ದು. ಆಸ್ತಿ ತೆರಿಗೆ ಮತ್ತು ಶುಲ್ಕವನ್ನು ಆನ್ಲೈನಲ್ಲಿ ಪಾವತಿ ಮಾಡಬಹುದು.
- ಅದೇ ರೀತಿಯಾಗಿ ಅಧಿಕಾರಿಗಳಿಂದ ನಿಗದಿತ 15 ದಿನದ ಒಳಗಾಗಿ ಅನುಮೋದನೆ ದೊರೆಯದೆ ಇದ್ದರೆ ಸಿಸ್ಟಮ್ ಸ್ವಯಂ ಚಾಲಿತವಾಗಿ ಅನುಮೋದನೆಯನ್ನು ನೀಡುವ ವ್ಯವಸ್ಥೆಯನ್ನು ಜಾರಿಗೆ ಮಾಡಲಾಗಿದೆ.
- ಹಾಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳ ಕರಡು ದಾಖಲೆಗಳನ್ನು ಸಾರ್ವಜನಿಕರಿಗೆ ಆನ್ಲೈನಲ್ಲಿ ಪರಿಶೀಲನೆಗೆ ಲಭ್ಯ ಮಾಡಲಾಗಿದೆ.
ಡಿಜಿಟಲ್ ತಂತ್ರಾಂಶದ ಅಭಿವೃದ್ಧಿ
ಈಗ ಈ ಸ್ವತ್ತು ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರವು ಸ್ವಸ ತಂತ್ರಾಂಶವನ್ನು ಬಿರುದುಪಡಿಸಿದ್ದು. ಈ ಒಂದು ತಂತ್ರಾಂಶವು ಈಗ 15 ದಿನದ ಒಳಗೆ ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬರುತ್ತದೆ. ಈಗ ಗ್ರಾಮೀಣ ನಾಗರಿಕರಿಗೆ ಆನ್ಲೈನ್ ಮೂಲಕ ಮತ್ತು ಆಸ್ತಿ ಸಂಬಂಧಿಸಿದ ಸೇವೆಗಳನ್ನು ಪಡೆಯಲು ಈಗ ಅನುಕೂಲಕರ ಮಾಡಲಾಗುತ್ತದೆ.
ಗ್ರಾಮೀಣ ಅಭಿವೃದ್ಧಿಗೆ ಉತ್ತೇಜನ
ಈಗ ಈ ಸ್ವತ್ತು ಯೋಜನೆಯಿಂದ ಗ್ರಾಮ ಪಂಚಾಯತಿಗಳ ಆದಾಯ ವೃದ್ಧಿಯಾಗುವುದರಿಂದ ಹಾಗೆ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹೆಚ್ಚಿನ ಹಣಕಾಸು ಬೆಂಬಲ ದೊರೆತಾಗುತ್ತದೆ. ಹಾಗೆ ತೆರಿಗೆ ಮತ್ತು ಶುಲ್ಕಗಳಿಗೆ ಸಂಬಂಧಿಸಿದ ವಿವಾದಗಳನ್ನು ಪರಿಹರಿಸಲು ಈಗ ಉಪ ಕಾರ್ಯದರ್ಶಿ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕರಿಗೆ ಮೇಲ ಮನವಿಗೆ ಅವಕಾಶವನ್ನು ನೀಡಲಾಗಿದೆ. ಈ ಒಂದು ವ್ಯವಸ್ಥೆಯು ವಿವಾದಗಳನ್ನು ತೋರಿಸುತ್ತದೆ.