Gruhalakshmi Yoajane Pending Amount Credit: ಗೃಹಲಕ್ಷ್ಮಿ ಯೋಜನೆಯ 2ತಿಂಗಳ ಬಾಕಿ ಹಣ ಜಮಾ! ಸಚಿವರಿಂದ ಸ್ಪಷ್ಟ ಮಾಹಿತಿ.
ಈಗ ನಮ್ಮ ಕರ್ನಾಟಕದ ಲಕ್ಷಾಂತರ ಮಹಿಳೆಯರು ಈಗ ಕಾತುರದಿಂದ ಕಾದು ಕುಳಿತಿರುವಂತಹ ಈ ಒಂದು ಗೃಹಲಕ್ಷ್ಮಿ ಯೋಜನೆಯ ಮಹಿಳೆಯರಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಈಗ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿಗೆ ಸೇರಿದಂತಹ 4000 ಹಣವನ್ನು ಅಂದರೆ ಬಾಕಿ ಇರುವಂತಹ ಹಣಗಳನ್ನು ಈಗ ಅತ್ಯಂತ ಶೀಘ್ರದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಈಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಆದಂತ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈಗ ಭರವಸೆಯನ್ನು ನೀಡಿದ್ದಾರೆ.

ಈಗ ಸಚಿವರು ತುಮಕೂರು ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅಂತಹ ಮಾಹಿತಿ ಪ್ರಕಾರ ಈಗಾಗಲೇ ಉನ್ನತ ಮಟ್ಟದಲ್ಲಿ ಸಿದ್ಧತೆಯು ನಡೆಸುತ್ತಾ ಇದ್ದು. ಆದಷ್ಟು ಬೇಗ ಮಹಿಳೆಯರ ಖಾತೆಗಳಿಗೆ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣವನ್ನು ಜಮಾ ಮಾಡಲಾಗುತ್ತದೆ ಎಂದು ಸ್ಪಷ್ಟ ಮಾಹಿತಿಯನ್ನು ನೀಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಮಾಹಿತಿ
ಈಗ ನಮ್ಮ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಅತ್ಯಂತ ಜನಪ್ರಿಯ ಮತ್ತು ಪರಿಣಾಮಕಾರಿ ಯೋಜನೆ ಎಂದರೆ ಅದು ಗೃಹಲಕ್ಷ್ಮಿ ಯೋಜನೆಯ ಈಗ ಈ ಒಂದು ಯೋಜನೆ ಅಡಿಯಲ್ಲಿ ರಾಜ್ಯದ ಸುಮಾರು 1.28 ಕೋಟಿ ಮಹಿಳಾ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಈಗ ಪ್ರತಿ ತಿಂಗಳು 2000 ಹಣವನ್ನು ಸರ್ಕಾರವು ನೇರವಾಗಿ ಜಮಾ ಮಾಡುತ್ತಾ ಬಂದಿದೆ. ಅದೇ ರೀತಿಯಾಗಿ ನಮ್ಮ ದೇಶದ ಅತಿ ದೊಡ್ಡ ಯೋಜನೆ ಎಂದು ಇದು ಹೇಳಿದರೆ ತಪ್ಪಾಗುವುದಿಲ್ಲ.
ಅದೇ ರೀತಿಯಾಗಿ ಈಗ ಈ ಒಂದು ಯೋಜನೆಯು ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಸರಕಾರ 18000 ಕೋಟಿಗಿಂತ ಹೆಚ್ಚು ಹಣವನ್ನು ಮಹಿಳೆಯರ ಖಾತೆಗಳಿಗೆ ಈಗಾಗಲೇ ವರ್ಗಾವಣೆ ಮಾಡಿದೆ. ಇದು ಈಗ ಕೇವಲ ಆರ್ಥಿಕ ಸಹಾಯವಲ್ಲ ಅಷ್ಟದೇ ಅಲ್ಲದೆ ಮಹಿಳೆಯರ ಸ್ವಾಯುಕ್ತತೆ ಮತ್ತು ಮನೆಯ ಆರ್ಥಿಕ ನಿರ್ವಹಣೆಯನ್ನು ನಿರ್ವಹಿಸುವಲ್ಲಿ ನೇರವಾಗಿ ಸಹಾಯ ಮಾಡುತ್ತಾ ಇದೆ.
ಬಾಕಿ ಹಣ ವಿಳಂಬ ಏಕೆ?
ಈಗ ಈ ಹಿಂದೆ ಆಗಸ್ಟ್ ತಿಂಗಳ ಕಂತುಗಳು ಈಗ ಸೆಪ್ಟೆಂಬರ್ ನಲ್ಲಿ ಜಮಾ ಆಗಿತ್ತು. ಆದರೆ ಸಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ಕಂತುಗಳು ಇನ್ನು ಯಾವುದೇ ರೀತಿಯಾಗಿ ಬಿಡುಗಡೆ ಆಗಿಲ್ಲ. ಇದಕ್ಕೆ ಮುಖ್ಯ ಕಾರಣಗಳು ಏನೆಂದರೆ,
ಫಲಾನುಭವಿಗಳ ಆಧಾರ್ ಬ್ಯಾಂಕ್ ಲಿಂಕ್ ಸಮಸ್ಯೆಗಳ ಪರಿಹಾರ ಮಾಡುವುದು. ಹಾಗೆ ಫಲಾನುಭವಿಗಳ ದಾಖಲೆಗಳ ಪರಿಶೀಲನೆ ಹಾಗು ತಾಂತ್ರಿಕ ಫಲಾನುಭವಿಗಳ ಆಧಾರ್ ಬ್ಯಾಂಕ್ ಲಿಂಕ್ ಸಮಸ್ಯೆಗಳ ಪರಿಹಾರ ಮಾಡುವುದು. ಹಾಗೆ ಫಲಾನುಭವಿಗಳ ದಾಖಲೆಗಳ ಪರಿಶೀಲನೆ ಹಾಗು ತಾಂತ್ರಿಕ ಸಮಸ್ಯೆಗಳಿಂದಾಗಿ ಅಂದರೆ DBT ಪ್ರಕ್ರಿಯೆಯಲ್ಲಿ ಸ್ವಲ್ಪ ವಿಳಂಬದ ಕಾರಣದಿಂದಾಗಿ ಈ ಒಂದು ಹಣವು ಜಮಾ ಆಗುವುದು ತಡವಾಗಿದೆ.
ಆದರೆ ಈಗ ಸಚಿವರು ಆದಂತಹ ಲಕ್ಷ್ಮಿ ಹೆಬ್ಬಾಳಕರ್ ಅವರು ನೀಡಿರುವ ಮಾಹಿತಿ ಪ್ರಕಾರ ಶೀಘ್ರದಲ್ಲಿ ಈ ಒಂದು ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಗೃಹಲಕ್ಷ್ಮಿ ಸ್ಟೇಟಸ್ ಚೆಕ್ ಮಾಡಿಕೊಳ್ಳುವುದು ಹೇಗೆ?
- ನೀವು ಗೃಹಲಕ್ಷ್ಮಿ ಯೋಜನೆ ಹಣವನ್ನು ಚೆಕ್ ಮಾಡಿಕೊಳ್ಳಬೇಕೆಂದರೆ ಪ್ಲೇ ಸ್ಟೋರ್ ಗೆ ಹೋಗಿ ಕರ್ನಾಟಕ DBT ಅಪ್ಲಿಕೇಶನ್ ಅನ್ನು ಮೊದಲು ಡೌನ್ಲೋಡ್ ಮಾಡಿಕೊಳ್ಳಿ.
- ಆನಂತರ ನೀವು ಅದರಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಅನ್ನು ಎಂಟರ್ ಮಾಡಿ ರಜಿಸ್ಟರ್ ಆಗಿ.
- ಆನಂತರ ನೀವು ನಿಮ್ಮ ನೆನಪಿನಲ್ಲಿ ಉಳಿಯುವ 4 ಅಂಕಿಯ MPIN ಕ್ರಿಯೇಟ್ ಮಾಡಿಕೊಳ್ಳಿ.
- ಆನಂತರ ಗೃಹಲಕ್ಷ್ಮಿ ಯೋಜನೆ ಮೇಲೆ ಕ್ಲಿಕ್ ಮಾಡಿಕೊಳ್ಳಿ.
- ಆನಂತರ ಅದರಲ್ಲಿ ನಿಮಗೆ ಇದುವರೆಗೂ ಎಷ್ಟು ಕಂತಿನ ಹಣ ಜಮಾ ಆಗಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ.