Gruhalakshmi Yojane Society Bank Loan: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಈಗ ಸೊಸೈಟಿ ಬ್ಯಾಂಕಿನಿಂದ ಕಡಿಮೆ ಬಡ್ಡಿ ದರದಲ್ಲಿ 3 ಲಕ್ಷದವರೆಗೆ ಸಾಲ!

Gruhalakshmi Yojane Society Bank Loan: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಈಗ ಸೊಸೈಟಿ ಬ್ಯಾಂಕಿನಿಂದ ಕಡಿಮೆ ಬಡ್ಡಿ ದರದಲ್ಲಿ 3 ಲಕ್ಷದವರೆಗೆ ಸಾಲ!

ಈಗ ನಮ್ಮ ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಈಗ ಪ್ರತಿ ತಿಂಗಳು 2000 ಹಣವನ್ನು ಪಡೆಯುತ್ತಿರುವಂತಹ ನಮ್ಮ ರಾಜ್ಯದ ಮಹಿಳೆಯರಿಗೆ ಇದೀಗ ರಾಜ್ಯ ಸರ್ಕಾರವು ಮತ್ತೊಂದು ದೊಡ್ಡ ಮಾಹಿತಿಯನ್ನು ಬಿಡುಗಡೆಯನ್ನು ನೀಡಿದೆ. ಈಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಡಿಯಲ್ಲಿ ಗೃಹಲಕ್ಷ್ಮಿ ವಿವಿಧ ಉದ್ದೇಶ ಸಹಕಾರಿ ಸಂಘವನ್ನು ಸ್ಥಾಪಿಸಿ. ಈಗ ಈ ಒಂದು ಗೃಹಲಕ್ಷ್ಮಿ ಫಲಾನುಭವಿಗಳಿಗೆ ಈಗ ಕಡಿಮೆ ಬಡ್ಡಿ ದರದಲ್ಲಿ 3 ಲಕ್ಷದವರೆಗೆ ಸಾಲವನ್ನು ನೀಡಲು ಮುಂದಾಗಿದ್ದಾರೆ. ಇದು ಕೇವಲ ಸಾಲವನ್ನು ನೀಡುವುದಷ್ಟೇ ಅಲ್ಲದೆ ಮಹಿಳೆಯರ ಆರ್ಥಿಕ ಸ್ವಾತಂತ್ರ್ಯವನ್ನು ಕೂಡ ಬೆಂಬಿಸುವಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭ ಮಾಡಿದಂತಾಗುತ್ತದೆ.

Gruhalakshmi Yojane Society Bank Loan

ಈಗ ನೀವು ಕೂಡ ಈ ಒಂದು ಗೃಹಲಕ್ಷ್ಮಿ ಯೋಜನೆಯ ಬ್ಯಾಂಕಿನ ಮೂಲಕ ಯಾವ ರೀತಿಯಲ್ಲಿ ಸಾಲ ಪಡೆಯಬೇಕು ಮತ್ತು ಯಾವ ರೀತಿಯಾಗಿ ವ್ಯವಹಾರವನ್ನು ನಡೆಸುತ್ತದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಲು ನೀವು ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ.

ಇದು ಹೇಗೆ ಕಾರ್ಯನಿರ್ವಹಿಸುತ್ತದೆ

ಈಗ ಈ ಒಂದು ಸಹಕಾರಿ ಸಂಘವು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಮಹಿಳೆಯರ ಮಾಲೀಕರಾಗಿರುವ ಬ್ಯಾಂಕು ಆಗಿರುತ್ತದೆ. ಈಗ ಮಹಿಳೆಯರು ಪ್ರತಿ ತಿಂಗಳು ಬರುವಂಥ 2000 ರೂಪಾಯಿಯಲ್ಲಿ ಒಂದು ಭಾಗವನ್ನು ಈಗ ಈ ಒಂದು ಸಂಘದಲ್ಲಿ ಉಳಿತಾಯ ಅಂದರೆ ಜಮಾ ಮಾಡುವುದರ ಮೂಲಕ ಮಹಿಳೆಯರು ಈ ಒಂದು ಸಂಘದಲ್ಲಿ ಈಗ ಶೇರುದಾರರಾಗುತ್ತಾರೆ. ಈ ಒಂದು ಉಳಿತಾಯದ ಆಧಾರದ ಮೇಲೆ ಆ ಒಂದು ಸಂಘದ ಮೂಲಕ ಅವರಿಗೆ ಸಾಲವನ್ನು ನೀಡಲಾಗುತ್ತದೆ.

ಮುಖ್ಯ ಲಕ್ಷಣಗಳು ಏನು?

  • ಈಗ ಈ ಒಂದು ಗೃಹಲಕ್ಷ್ಮಿ ಯೋಜನೆಯ ಅರ್ಹ ಫಲಾನುಭವಿಗಳು ಮಾತ್ರ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
  • ಆನಂತರ ಈ ಒಂದು ಸದಸ್ಯತ್ವವನ್ನು ಪಡೆದುಕೊಳ್ಳಲು ಕೇವಲ 1000 ರೂಪಾಯಿಯನ್ನು ಒಮ್ಮೆ ನೀಡಿದರೆ ಸಾಕು.
  • ತದನಂತರ ನೀವು ಪ್ರತಿ ತಿಂಗಳು ಕೂಡ ಈ ಒಂದು ಬ್ಯಾಂಕ್ ನಲ್ಲಿ ಈಗ 200 ಹಣವನ್ನು ಜಮಾ ಮಾಡಿ. ಉಳಿತಾಯವನ್ನು ಮಾಡಬೇಕು.
  • ನೀವು ಸತತವಾಗಿ 6 ತಿಂಗಳ ಕಾಲ ಉಳಿತಾಯವನ್ನು ಮಾಡಿದ ನಂತರ ಸಾಲಕ್ಕೆ ಅರ್ಹತೆಗಳನ್ನು ಪಡೆದುಕೊಳ್ಳುತ್ತೀರಿ.
  • ಆನಂತರ ನೀವು ಈ ಒಂದು ಬ್ಯಾಂಕ್ ನ ಮೂಲಕ ಕನಿಷ್ಠ 30,000 ದಿಂದ ಗರಿಷ್ಠ 3 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು.
  • ಹಾಗೆ ಈ ಒಂದು ಸಾಲಕ್ಕೆ ಯಾವುದೇ ರೀತಿಯ ಜಾಮೀನು ಅಥವಾ ಶೂರಿಟಿ ನೀಡುವ ಅವಶ್ಯಕತೆ ಇಲ್ಲ.
  • ಹಾಗೆ ಈಗ ನೀವು ಯಾವ ಉದ್ಯಮಕ್ಕ ಬೇಕಾದರೂ ಕೂಡ ಈ ಒಂದು ಸಾಲವನ್ನು ಪಡೆದುಕೊಳ್ಳಬಹುದು.
  • ಹಾಗೆ ಈ ಒಂದು ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.

ವಿಶೇಷತೆ ಏನು?

ಈ ಒಂದು ಬ್ಯಾಂಕಿಗೆ ಮಹಿಳೆಯರೇ ಮಾಲೀಕರಾಗಿದ್ದಾರೆ. ಈ ಒಂದು ಬ್ಯಾಂಕ್ ಅನ್ನು ಯಾವುದೇ ಕಾರಣಕ್ಕೂ ಕೂಡ ಸ್ಥಗಿತ ಮಾಡಲು ಸಾಧ್ಯವಿರುವುದಿಲ್ಲ. ಖಾಸಗಿ ಫೈನಾನ್ಸ್ ಗಳ ಹೆಚ್ಚಿನ ಬಡ್ಡಿ ಮತ್ತು ಕಿರುಕುಳದಿಂದ ಮುಕ್ತಿ ನೀಡುವ ಉದ್ದೇಶದಿಂದ ಒಂದು ಬ್ಯಾಂಕನ್ನು ಪ್ರಾರಂಭ ಮಾಡಲಾಗಿದೆ. ಅಷ್ಟೇ ಅಲ್ಲದೆ ಶ್ರೀ ಶಕ್ತಿ ಸ್ವ ಸಹಾಯ ಸಂಘಗಳ ಅನುಭವದ ಮೇಲೆ ಇದನ್ನು ರೂಪಾಂತರ ಮಾಡಲಾಗಿದೆ.

ಸಾಲವನ್ನು ಪಡೆಯುವುದು ಹೇಗೆ?

  • ಈಗ ಈ ಒಂದು ಸಾಲಕ್ಕೆ ಅರ್ಜಿ ಸಲ್ಲಿಸಲು ಗೃಹಲಕ್ಷ್ಮಿ ಯೋಜನೆಗೆ  ನೋಂದಾಯಿತ ಫಲಾನುಭವಿ ಆಗಿರಬೇಕು.
  • ಆನಂತರ ಸಹಕಾರಿ ಸಂಘಕ್ಕೆ 1000 ರೂಪಾಯಿ ಶೇರು ಹಣ ನೀಡಿ ಸದಸ್ಯತ್ವ ಪಡೆದುಕೊಳ್ಳಬೇಕು.
  • ಹಾಗೆ 6 ತಿಂಗಳ ಕನಿಷ್ಠ 200 ರೂಪಾಯಿಯಂತೆ ಉಳಿತಾಯ ಮಾಡಬೇಕು.
  • ಹಾಗೆ 6 ತಿಂಗಳ ನಂತರ ನಿಮ್ಮ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಅಥವಾ ಸಹಕಾರಿ ಸಂಘದ ಅಧಿಕಾರಿಗಳನ್ನು ಭೇಟಿ ಮಾಡಿ ನೀವು ಕೂಡ ಸಾಲವನ್ನು ಪಡೆಯಬೇಕು.

ಈಗ ನೀವು ಕೂಡ ಈ ಒಂದು ಗೃಹಲಕ್ಷ್ಮಿ ಯೋಜನೆಯ ಸಹಕಾರಿ ಸಂಘದ ಬ್ಯಾಂಕ್ ನ ಮೂಲಕ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ. ಈಗ ಈ ಒಂದು ಲೇಖನದಲ್ಲಿ ನೀಡುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ನೀವು ಕೂಡ ಈ ಒಂದು ಬ್ಯಾಂಕ್ ನ ಮೂಲಕ ಈಗ ತ್ವರಿತವಾಗಿ ಸಾಲವನ್ನು ಪಡೆದುಕೊಳ್ಳಬಹುದು.

Leave a Comment