Gruhalakshmi Yojane Updates: ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಹೊಸ ಅಪ್ಡೇಟ್ ನೀಡಿದ ಸರ್ಕಾರ! ಇಲ್ಲಿದೆ ನೋಡಿ ಮಾಹಿತಿ.
ಈಗ ನಮ್ಮ ಕರ್ನಾಟಕದ ಮಹಿಳೆಯರ ಆರ್ಥಿಕ ಸ್ವಾತಂತ್ರ್ಯ ನೀಡುವ ಮಹತ್ವದ ಯೋಜನೆ ಆರಂಭವಾದಂತ ಈ ಒಂದು ಗೃಹಲಕ್ಷ್ಮಿ ಯೋಜನೆಯ ಸಾಕಷ್ಟು ಚರ್ಚೆಗೆ ಮುಂದಾಗಿದೆ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವೆಂಬರ್ 6 ರಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಸ್ಟಿನಲ್ಲಿ ಈಗ 99% ಫಲಾನುಭವಿಗಳು ಈಗ ಪ್ರತಿ ತಿಂಗಳು 2000 ಹಣವನ್ನು ಈಗ ಪಡೆದುಕೊಳ್ಳುತ್ತಿದ್ದಾರೆ ಎಂದು ಮಾಹಿತಿಯನ್ನು ನೀಡಿದ್ದಾರೆ.

ಅದೇ ರೀತಿಯಾಗಿ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಬಿಡುಗಡೆ ಮಾಡಿರುವ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದು ಗೃಹಲಕ್ಷ್ಮೀ ಯೋಜನೆ ಅತ್ಯಂತ ಜನಪ್ರಿಯ ಯೋಜನೆಯಾಗಿದೆ. ಈಗ ಈ ಒಂದು ಯೋಜನೆಯ ಮೂಲಕ ಈಗ ಮಹಿಳೆಯರಿಗೆ ಹಣವನ್ನು ಪ್ರತಿ ತಿಂಗಳು ಜಮಾ ಮಾಡುತ್ತ ಬಂದಿತ್ತು.
ಈಗ ಕಳೆದ ಎರಡು ಮೂರು ತಿಂಗಳಿನಿಂದ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗುವುದು ಸಾಕಷ್ಟು ವಿಳಂಬವಾಗುತ್ತಾ ಇದ್ದು. ಅದೇ ರೀತಿಯಾಗಿ ಈಗ ಸರ್ಕಾರದ ವಿರುದ್ಧ ಮಹಿಳೆಯರು ಆಕ್ರೋಶವನ್ನು ವ್ಯಕ್ತಪಡಿಸುತ್ತಾ ಇದ್ದಾರೆ. ಆದರೆ ಈಗ ಸರ್ಕಾರ ಇದಕ್ಕೆ ಪ್ರತ್ಯುತ್ತರವಾಗಿ ನಾವು ಈಗ ಬಾಕಿ ಇರುವಂತಹ ಹಣವನ್ನು ಕೆಲವೇ ದಿನಗಳಲ್ಲಿ ಪ್ರತಿಯೊಬ್ಬ ಮಹಿಳೆಯರ ಖಾತೆಗಳಿಗೆ ಜಮಾ ಮಾಡುತ್ತೇವೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
CM ಸಿದ್ದರಾಮಯ್ಯನವರು ನೀಡುವ ಮಾಹಿತಿ ಏನು?
ಈಗ ನಮ್ಮ ಸರ್ಕಾರದ ಏಕೈಕ ಗುರಿ ಪ್ರತಿ ಮಹಿಳೆಯರನ್ನು ಆರ್ಥಿಕವಾಗಿ ಸ್ವತಂತ್ರಗೊಳಿಸುವುದು ಹಾಗೆ ಇಂದು 99% ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಮೇಲೆ ನಿಯಂತ್ರಣವನ್ನು ಹೊಂದಿದ್ದಾರೆ. ಇದು ಈಗ ಮನೆಯ ಒಟ್ಟು ಆದಾಯದ ಸುಮಾರು 13% ನಷ್ಟು ನಿಯಂತ್ರಣವನ್ನು ಮಾಡುತ್ತದೆ.
ಈಗ ಈ ಒಂದು ಹಣದಿಂದ ಆಹಾರ ಆರೋಗ್ಯ ಮತ್ತು ಮಕ್ಕಳ ಶಿಕ್ಷಣ ಹಲವಾರು ರೀತಿಯ ಅಗತ್ಯಗಳಿಗೆ ಸಹಾಯ ಮಾಡುತ್ತಾ ಇದೆ. ಈಗ ಮಹಿಳೆಯರ ಕೈಯಲ್ಲಿ ಇರುವಂತಹ ಹಣವು ಕೂಡ ಕುಟುಂಬದ ಅಭಿವೃದ್ಧಿಗೆ ದಾರಿಯನ್ನು ಮಾಡಿ ಕೊಡುತ್ತದೆ ಎಂದು ಈಗ ಸಿಎಂ ಸಿದ್ದರಾಮಯ್ಯನವರು ಮಾಹಿತಿಯನ್ನು ನೀಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಸ್ಥಿತಿ ಏನು?
ಈಗ ಈ ಒಂದು ಯೋಜನೇಯ ಫಲಾನುಭವಿಗಳ ಸಂಖ್ಯೆ 1.25 ಕೋಟಿಗೂ ಹೆಚ್ಚು ಮಹಿಳೆಯರು ನೋಂದಾವಣೆಯನ್ನು ಮಾಡಿಕೊಂಡಿದ್ದು. ಇತ್ತೀಚಿಗೆ ಅಕ್ಟೋಬರ್ 20 2025 ರಂದು 22 ಕಂತಿನ ಹಣವನ್ನು ಈಗ ಬಿಡುಗಡೆ ಮಾಡಿದ್ದು. ಈ ಒಂದು ಯೋಜನೆ ಹಣವನ್ನು ಈಗ ಸರಕಾರ ವಾರ್ಷಿಕ ಬಜೆಟ್ಟಿನಲ್ಲಿ 28,608 ಕೋಟಿ ಹಣವನ್ನು ಮೀಸಲು ಇಟ್ಟಿದೆ.
ಹಣ ಬರದೆ ಇರಲು ಕಾರಣಗಳು ಏನು?
- ಈ ಯೋಜನೆನ ಹಣ ಜಮಾ ಆಗದೆ ಇರಲು ಮೊದಲು ನಿಮ್ಮ ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗ್ ಆಗದೆ ಇರುವುದು.
- ಆನಂತರ ರೇಷನ್ ಕಾರ್ಡ್ ಗೆ EKYC ಪೂರ್ಣ ಆಗದಿರುವುದು.
- ಹಾಗೆ ನಿಮ್ಮ ಕುಟುಂಬದ ಆಧಾರದ ಮೇಲೆ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದಾರೆ ಅಂತವರದು ಕೂಡ ಅರ್ಹರಲ್ಲ.
ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳುವುದು ಹೇಗೆ?
ಈಗ ನೀವು ಕೂಡ ನಿಮ್ಮ ಖಾತೆಗೂ ಒಂದು ಗೃಹಲಕ್ಷ್ಮಿ ಯೋಜನೆ ಹಣವು ಜಮಾ ಆಗಿದೆ ಇಲ್ಲವೇ ಎಂಬುವುದರ ಬಗ್ಗೆ ಮಾಹಿತಿಯನ್ನು ಪಡೆಯಬೇಕೇ ಈಗ ನಾವು ಈಗಾಗಲೇ ತಿಳಿಸಿರುವ ಹಂತಗಳನ್ನು ಅನುಸರಿಸಿ ಆಗ ಮಾತ್ರ ನೀವು ಕೂಡ ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗಿರುವ ಮಾಹಿತಿ ಪಡೆಯಬಹುದು.
- ಮೊದಲಿಗೆ ನೀವು ನಿಮ್ಮ ಮೊಬೈಲ್ ನಲ್ಲಿ DBT ಕರ್ನಾಟಕ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ.
- ಆನಂತರ ನೀವು ಅದರಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಎಂಟರ್ ಮಾಡಿ. ಲಾಗಿನ್ ಮಾಡಿಕೊಳ್ಳಿ.
- ತದನಂತರ ನೀವು ನಿಮ್ಮ ನೆನಪಿನಲ್ಲಿ ಉಳಿಯುವ ಒಂದು ನಾಲ್ಕು ಅಂಕಿಯ ಪಾಸ್ವರ್ಡ್ ಅನ್ನು ಕ್ರಿಯೇಟ್ ಮಾಡಿಕೊಳ್ಳಿ.
- ತದನಂತರ ನಿಮ್ಮ ಒಂದು ಪಾಸ್ವರ್ಡ್ ಅನ್ನು ಹಾಕಿ ಲಾಗಿನ್ ಮಾಡಿಕೊಳ್ಳಿ.
- ತದನಂತರ ಅದರಲ್ಲಿ ಪೇಮೆಂಟ್ ಸ್ಟೇಟಸ್ ಮೇಲೆ ನೀವು ಕ್ಲಿಕ್ ಮಾಡಿಕೊಳ್ಳಿ.
- ಆನಂತರ ಅದರಲ್ಲಿ ನೀವು ಗೃಹಲಕ್ಷ್ಮಿ ಯೋಜನೆ ಮೇಲೆ ಕ್ಲಿಕ್ ಮಾಡಿ.
- ಆನಂತರ ನಿಮಗೆ ಇದುವರೆಗೆ ಗೃಹಲಕ್ಷ್ಮಿ ಯೋಜನೆ ಜಮಾ ಆಗಿರುವುದರ ಸಂಪೂರ್ಣ ಮಾಹಿತಿ ಅದರಲ್ಲಿ ತಿಳಿಯುತ್ತದೆ.