Karnataka Police Requerment: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 4,656 ಹುದ್ದೆಗೆ ನೇಮಕಾತಿ! ಈಗಲೇ ಅರ್ಜಿಯನ್ನು ಸಲ್ಲಿಸಿ.

Karnataka Police Requerment: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 4,656 ಹುದ್ದೆಗೆ ನೇಮಕಾತಿ! ಈಗಲೇ ಅರ್ಜಿಯನ್ನು ಸಲ್ಲಿಸಿ.

ಈಗ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರ ಈಗ ಸಿಹಿ ಸುದ್ದಿಯೊಂದನ್ನು ನೀಡಿದೆ. ಈಗ ಶಿಬಿರದಲ್ಲಿ 4,656 ಕಾನ್ಸ್ಟೇಬಲ್ ಹಾಗೂ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟವಾಗಲಿದೆ.

Karnataka Police Requerment

ಈಗ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸುಮಾರು 18,581 ಖಾಲಿ ಹುದ್ದೆಗಳು ಇದ್ದು. ಈ ಒಂದು ಹುದ್ದೆಗಳ ಭರ್ತಿಗೆ ಈಗ ಕಾಲ ಕೂಡಿಬಂದಿದೆ. ಇಲಾಖೆಯಲ್ಲಿ ನಾವು ಒತ್ತಡವನ್ನು ತಪ್ಪಿಸುವ ಸಲುವಾಗಿ ಈಗ ಒಟ್ಟು ಕಾಲಿ ಇರುವಂತ ಹುದ್ದೆಗಳ ಪೈಕಿ 4656 ಪೊಲೀಸ್ ಕಾನ್ಸ್ಟೇಬಲ್ ಹಾಗೂ ರಿಸರ್ವ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳು ಸೇರಿ ವಿಧ ಹುದ್ದೆಗಳಿಗೆ ನೇಮಕಾತಿಗೆ ಚಾಲನೆಯನ್ನು ನೀಡಲಾಗಿದೆ.

ನೇಮಕಾತಿ ಪ್ರಾಧಿಕಾರಗಳ ನಿರ್ದೇಶನ ಏನು?

ಈಗ ಕಳೆದ 2024 ನವೆಂಬರಲ್ಲಿ ರಾಜ್ಯ ಪೊಲೀಸ್ ಇಲಾಖೆಯ 4,415 ಹುದ್ದೆಗಳ ಭರ್ತಿಗೆ ಮುಂದಾಗಿತ್ತು. ಆದರೆ ಈಗ ಒಳ ಮೀಸಲಾತಿ ನಿಗದಿಯಾಗುವವರೆಗೂ ಯಾವುದೇ ರೀತಿಯಾದಂತಹ ಹೊಸ ನೇಮಕಾತಿಗಳನ್ನು ಮಾಡುವಂತಿಲ್ಲ ಎಂದು ರಾಜ್ಯ ಸರ್ಕಾರ ಸೂಚಿಸಿದ್ದರಿಂದ ನೇಮಕಾತಿ ಅಧಿಸೂಚನೆಯನ್ನು ಕಾಯ್ದಿರಿಸಲಾಗಿತ್ತು.

ಆದರೆ ಇದೀಗ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೊಸದಾಗಿ ಮಹತ್ವದ ಸುತ್ತೋಲೆಯನ್ನು ಬಿಡುಗಡೆ ಮಾಡಿದ್ದು. ಈಗ ಪರಿಶಿಷ್ಟ ಜಾತಿಗಳ ಒಳ ಮೀಸಲು ವರ್ಗೀಕರಣದಂತೆ ಈಗಾಗಲೇ ನಿಗದಿಪಡಿಸಿರುವ ರೋಸ್ಟರ್ ಬಿಂದು ಆದರಿಸಿ ಅನುಮೋದಿತ ಹುದ್ದೆಗಳಿಗೆ ಈಗ ನೇರ ನೇಮಕಾತಿ ಪ್ರಕ್ರಿಯೆಯನ್ನು ತೊರೆತಗೊಳಿಸಲು ಎಲ್ಲಾ ನೇಮಕಾತಿ ಪ್ರಾಧಿಕಾರಗಳು ಸ್ಪಷ್ಟ ನಿರ್ದೇಶನವನ್ನು ನೀಡಿವೆ.

ಈಗ ಈ ಒಂದು ಸಂಬಂಧ ಹಲವರು ಇಲಾಖೆಗಳು ಮಂಡಲಗಳು ನಿಗಮಗಳು ವಿಶ್ವವಿದ್ಯಾಲಯಗಳು ಹಾಗೂ ನೇಮಕಾತಿ ಆಯೋಗಗಳು ಹೊಸ ಅಧಿಸೂಚನೆಗಳನ್ನು ತಕ್ಷಣ ಹೊರಡಿಸಿ ನಿಗದಿತ ಕಾಲಮಿತಿಯಲ್ಲಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸರ್ಕಾರವೇ ಸೂಚಿಸಿದೆ.

ಈಗ 4 9 2025 ರಂದು ಡೈರೆಕ್ಟರ್ ಜನರಲ್ ಮತ್ತು ಇನ್ಸ್ಪೆಕ್ಟರ್ ಜನರಲ್ ಆಫ್ ಪೋಲಿಸ್ ಡಾಕ್ಟರ್ ಎಂ ಎಸ್ ಹಲೀಮ್ ಅವರು ನೇಮಕಾತಿ ಪ್ರಕ್ರಿಯೆ ಸಂಬಂಧಿಸಿದಂತೆ ನೇಮಕಾತಿ ಕುರಿತು ಅಧಿಕೃತ ಜ್ಞಾಪನ ಪತ್ರ ಪ್ರಕಟಣೆ ಮಾಡಿದ್ದಾರೆ.

ಭರ್ತಿಯ ಹುದ್ದೆಗಳು ಯಾವುವು?

ಈಗ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಪ್ರಸ್ತುತ ನೇಮಕಾತಿಯ ಮರು ಹಂಚಿಕೆಯು ಮಾಡಲಾಗಿರುವಂತ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಹುದ್ದೆಗಳ ವಿವರಗಳು ಅಂದರೆ

  • DSP: 20 ಹುದ್ದೆಗಳು
  • SPC:1650
  • ಸಿವಿಲ್: 614
  • KSRP: 232
  • ಪೊಲೀಸ್ ಕಾನ್ಸ್ಟೇಬಲ್: 340

ಒಟ್ಟಾರೆ 4656 ಹುದ್ದೆಗೆ ನೇಮಕಾತಿ ಬಿಡುಗಡೆಯಾಗುವ ಸಾಧ್ಯತೆ ಇದೆ

ಈಗ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಸದರಿ ಖಾಲಿ ಹುದ್ದೆಗಳು ಪದವಿ ಪಿಯುಸಿ ಹಂತದ ವಿದ್ಯಾರ್ಥಿ ಹೊಂದಿದ ಪ್ರತಿಯೊಬ್ಬ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದೆ.

ಅಷ್ಟೇ ಅಲ್ಲದೆ ಇನ್ನು ಕೆಲವೇ ದಿನಗಳಲ್ಲಿ ಈ ಒಂದು ಕುರಿತಂತೆ ಅಧಿಕೃತವಾಗಿ ಸೂಚನೆ ಬಿಡುಗಡೆಯಾಗುತ್ತದೆ. ಈ ಒಂದು ಹುದ್ದೆ  ಅರ್ಜಿ ಸಲ್ಲಿಕೆ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳಲು ನಮ್ಮ ಮಾಧ್ಯಮಕ್ಕೆ ನೀವು ಭೇಟಿ ನೀಡಬಹುದು.

Leave a Comment