Krushi Honda Scheme In Farmars: ಕೃಷಿ ಭಾಗ್ಯ ಯೋಜನೆಯಡಿಯಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ರೈತರಿಗೆ ಶೇಕಡ 90ರಷ್ಟು ಸಹಾಯಧನ!
ಈಗ ಕರ್ನಾಟಕ ಸರ್ಕಾರ 2025 26 ನೇ ಸಾಲಿನಲ್ಲಿ ಕೃಷಿ ಇಲಾಖೆ ವತಿಯಿಂದ ಈ ಒಂದು ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ಅರ್ಹ ಫಲಾನುಭವಿಗಳಿಂದ ಈಗ ಕೃಷಿ ಹೊಂಡ ನಿರ್ಮಾಣ ಮಾಡಿಕೊಳ್ಳಲು 90% ಸಹಾಯಧನವನ್ನು ಈಗ ನೀಡಲು ಅರ್ಜಿ ಸಲ್ಲಿಕೆಗಳನ್ನು ಪ್ರಾರಂಭ ಮಾಡಿದೆ.

ಅಷ್ಟೆ ಅಲ್ಲದೆ ಈಗಾಗಲೇ ಕೆಲವೊಂದು ರೈತರು ಈಗ ಮಳೆ ಆಧಾರವನ್ನಾಗಿ ಅವಲಂಬಿಸಿರುವ ಕೃಷಿಯಲ್ಲಿ ನೀರಿನ ಕೊರತೆ ಹೆಚ್ಚಾಗುತ್ತಾ ಇದ್ದು. ಈ ಒಂದು ಸಮಸ್ಯೆಗಳಿಗೆ ಈಗ ಶಾಶ್ವತವಾಗಿ ಪರಿಹಾರವನ್ನು ನೀಡುವ ಉದ್ದೇಶದಿಂದ ಸರ್ಕಾರವು ಈಗ ಈ ಒಂದು ಯೋಜನೆಯನ್ನು ಜಾರಿಗೆ ಮಾಡಿದೆ.
ಈಗ ನೀವು ಕೂಡ ಈ ಒಂದು ಯೋಜನೆ ಅಡಿಯಲ್ಲಿ ಕೃಷಿ ಹೊಂಡವನ್ನು ನಿರ್ಮಾಣ ಮಾಡಿ. ನೀರನ್ನು ಶೇಖರಣೆ ಮಾಡಿ ಬೆಳೆಗಳಿಗೆ ಅವಶ್ಯಕ ಸಂದರ್ಭಗಳಲ್ಲೂ ಉಪಯೋಗಿಸಿಕೊಳ್ಳಲು ಈಗ ಈ ಒಂದು ಅವರು ತಮ್ಮ ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಹಾಗೆಯೇ ಬರಗಾಲದಲ್ಲಿ ಸಂದರ್ಭದಲ್ಲಿ ಬೆಳೆ ನಷ್ಟವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಒಂದು ಯೋಜನೆಯನ್ನು ಬಿಡುಗಡೆ ಮಾಡಿದ್ದಾರೆ.
ಈಗ ನೀವು ಕೂಡ ಈ ಒಂದು ಸಹಾಯವನ್ನು ಪಡೆದುಕೊಳ್ಳಲು ಈಗ ಅರ್ಹತೆಗಳನ್ನು, ಯಾರೆಲ್ಲ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಅರ್ಜಿಯನ್ನು ಯಾವ ರೀತಿ ಸಲ್ಲಿಸಬೇಕು ಎಂಬುದರ ಬಗ್ಗೆ ಸಂಪೂರ್ಣವಾದಂತ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.
ಈ ಯೋಜನೆ ಅಡಿಯಲ್ಲಿ ದೊರೆಯುವ ಸಹಾಯಧನ ಎಷ್ಟು?
ಈಗ ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ಈಗ ಆಸಕ್ತ ಇರುವಂತಹ ಅರ್ಹ ಫಲಾನುಭವಿಗಳಿಗೆ ಕೃಷಿ ಇಲಾಖೆಯ ವತಿಯಿಂದ ಈಗ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರೈತರಿಗೆ ಈಗ ಶೇಕಡಾ 90ರಷ್ಟು ಹಾಗೂ ಇದರ ಇತರೆ ವರ್ಗದ ರೈತರಿಗೆ ಈಗ ಶೇಕಡ 80ರಷ್ಟು ಸಹಾಯಧನವನ್ನು ಈಗ ನೀಡಲಾಗುತ್ತದೆ.
ಅದೇ ರೀತಿಯಾಗಿ ಈ ಒಂದು ಕೃಷಿ ಹೊಂಡ ನಿರ್ಮಾಣವನ್ನು ಮಾಡಿದ ನಂತರ ನೀರು ಬೇಗನೆ ಇಂಗಿ ಹೋಗದಂತೆ ಈಗ ಪಾಲಿಥೀನ ಹೊದಿಕೆ ಅನ್ನು ನೀಡಲಾಗುತ್ತದೆ. ಆನಂತರ ಹೋಂಡದಿಂದ ನೀರನ್ನು ಜಮೀನಿಗೆ ಪೂರೈಕೆ ಮಾಡಲು ಡೀಸೆಲ್ ಪಂಪ್ಸೆಟ್ ಹಾಗೂ ಕೃಷಿ ಹೊಂಡಕ್ಕೆ ತಂತಿ ಬೇಲಿಗಳನ್ನು ಹಾಕಿಕೊಳ್ಳಲು ಕೂಡ ಸಬ್ಸಿಡಿಯನ್ನು ನೀಡಲಾಗುತ್ತದೆ.
ಅರ್ಹತೆಗಳು ಏನು?
- ಅರ್ಜಿ ಸಲ್ಲಿಸುವ ರೈತರ ಹೆಸರಿನಲ್ಲಿ ಕಡ್ಡಾಯವಾಗಿ ಕೃಷಿ ಜಮೀನನ್ನು ಹೊಂದಿರಬೇಕು.
- ಹಾಗೆ ರೈತರು ಈ ಒಂದು ಯೋಜನೆ ಅಡಿಯಲ್ಲಿ ಹಿಂದಿನ ವರ್ಷದಲ್ಲಿ ಸಹಾಯಧನವನ್ನು ಪಡೆದುಕೊಂಡಿರಬಾರದು.
- ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸೇರಿದ ರೈತರು ಆಗಿರಬೇಕು.
- ರೈತರು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಪಹಣಿ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಖಾತೆ ವಿವರ
- ರೇಷನ್ ಕಾರ್ಡ್
- ಫೋಟೋ
- ಮೊಬೈಲ್ ನಂಬರ್
ಅರ್ಜಿ ಸಲ್ಲಿಸುವುದು ಹೇಗೆ?
ಈಗ ಈ ಒಂದು ಕೃಷಿ ಹೊಂಡಕ್ಕೆ ಅಗತ್ಯವಿರುವ ಆಸಕ್ತ ರೈತರು ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದಿರುವ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಈ ಮೇಲೆ ತಿಳಿಸಿರುವ ದಾಖಲೆಗಳನ್ನು ತೆಗೆದುಕೊಂಡು ನೀವು ಕೂಡ ನೇರವಾಗಿ ಭೇಟಿ ನೀಡಿ. ಅರ್ಜಿ ಸಲ್ಲಿಕೆ ಮಾಡಬಹುದು.