Labour Card Childerns Scholarship: ಕಾರ್ಮಿಕರ ಮಕ್ಕಳಿಗೆ 20,000 ವಿದ್ಯಾರ್ಥಿ ವೇತನ! ಈ ಕೂಡಲೇ ಅರ್ಜಿ ಸಲ್ಲಿಸಿ.
ಈಗ 2025 26 ನೇ ಸಾಲಿನ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣದ ಅಡಿಯಲ್ಲಿ ಈಗ ಕಾರ್ಮಿಕ ಇಲಾಖೆಯ ಮೂಲಕ ಈಗಾಗಲೇ ಹಲವಾರು ಯೋಜನೆಗಳನ್ನು ಜಾರಿಯಲ್ಲಿ ಇದ್ದು. ಅವುಗಳಲ್ಲಿ ಈಗ ಕಾರ್ಮಿಕರ ಮಕ್ಕಳಿಗೆ 20,000 ವಿದ್ಯಾರ್ಥಿ ವೇತನವನ್ನು ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಕೆಗಳನ್ನು ಪ್ರಾರಂಭ ಮಾಡಲಾಗಿದೆ.

ಈಗ ಕಾರ್ಮಿಕ ಯೋಜನೆ ಅಡಿಯಲ್ಲಿ ಈಗ ಬಡ ಹಾಗೂ ಮಾಧ್ಯಮ ವರ್ಗದ ಕುಟುಂಬಗಳ ವಿಧ್ಯಾರ್ಥಿಗಳ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ವಿದ್ಯಾರ್ಥಿಗಳಿಗೆ ಈಗ ಶಿಕ್ಷಣವನ್ನು ಮುಂದುವರಿಸಿಕೊಂಡು ಹೋಗಲು ಅವರಿಗೆ ಆರ್ಥಿಕ ಸಹಾಯವನ್ನು ಮಾಡಲು ಈಗ ಆನ್ಲೈನ್ ಮೂಲಕ ಅರ್ಜಿಗಳನ್ನು ಈಗ ಕರೆಯಲಾಗಿದೆ. ಈಗ ಈ ಒಂದು ಲೇಖನದ ಮೂಲಕ ನೀವು ಅರ್ಜಿಯನ್ನು ಸಲ್ಲಿಸಲು ಬೇಕಾಗುವ ದಾಖಲೆಗಳು ಏನು ಹಾಗೂ ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕು ಮತ್ತು ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಒಂದು ಲೇಖನದಲ್ಲಿ ಇದೆ.
ಕಾರ್ಮಿಕ ಕಾರ್ಡ್ ನ ಮಾಹಿತಿ
ಈಗ ಈ ಒಂದು ಕಾರ್ಮಿಕ ಕಾರ್ಡ್ ಅಥವಾ ಲೇಬರ್ ಕಾರ್ಡ್ ಎಂದರೆ ಕಾರ್ಮಿಕ ಇಲಾಖೆ ಅಥವಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೀಡುವಂತಹ ಒಂದು ಅಧಿಕೃತವಾದಂತಹ ಗುರುತಿನ ದಾಖಲೆಯಾಗಿದೆ. ಈ ಒಂದು ಕಾರ್ಡ್ ನಲ್ಲಿ ಈಗ ಕಾರ್ಮಿಕರ ಹೆಸರು, ವಿಳಾಸ, ಉದ್ಯೋಗ, ವಯಸ್ಸು ಮತ್ತು ಶಿಕ್ಷಣದ ಎಲ್ಲ ಅಗತ್ಯ ಇರುವ ಪ್ರಮುಖ ವೈಯಕ್ತಿಕ ದಾಖಲೆಗಳು ಆ ಒಂದು ಲೇಬರ್ ಕಾರ್ಡ್ ನಲ್ಲಿ ಇರುತ್ತವೆ.
ಈಗ ಕಾರ್ಮಿಕ ಕಾರ್ಡ್ ಹೊಂದಿರುವಂತ ಕಾರ್ಮಿಕರು ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳಾದಂತಹ ಪಿಂಚಣಿ, ಮಕ್ಕಳ ಶಿಕ್ಷಣ ಸಹಾಯಧನ, ಗೃಹ ನಿರ್ಮಾಣದ ಸಹಾಯದಿಂದ ಸೇರಿದಂತೆ ಅನೇಕ ಸೌಲಭ್ಯಗಳನ್ನು ಪಡೆಯಲು ಈ ಒಂದು ಕಾರ್ಡನ್ನು ಈಗ ಅವರು ಬಳಕೆ ಮಾಡಿಕೊಳ್ಳಬಹುದಾಗಿದೆ.
ದೊರೆಯುವ ವಿದ್ಯಾರ್ಥಿ ವೇತನ ಎಷ್ಟು?
- ಈಗ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 6000 ವಿದ್ಯಾರ್ಥಿ ವೇತನ ನೀಡಲಾಗುತ್ತದೆ.
- ಆನಂತರ ಪಿಯುಸಿ/ ಡಿಪ್ಲೋಮಾ/ ಐಟಿಐ ವಿದ್ಯಾರ್ಥಿಗಳಿಗೆ 8,000 ವಿದ್ಯಾರ್ಥಿ ವೇತನ ನೀಡಲಾಗುತ್ತದೆ.
- ಆನಂತರ ಪದವಿ ವಿದ್ಯಾರ್ಥಿಗಳಿಗೆ 10,000 ವಿದ್ಯಾರ್ಥಿ ವೇತನ ನೀಡಲಾಗುತ್ತದೆ.
- ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ 12,000 ವಿದ್ಯಾರ್ಥಿ ವೇತನ ನೀಡಲಾಗುತ್ತದೆ.
- ಹಾಗೆ ಇಂಜಿನಿಯರ್ ವಿದ್ಯಾರ್ಥಿಗಳಿಗೆ 20,000 ವಿದ್ಯಾರ್ಥಿ ವೇತನ ನೀಡಲಾಗುತ್ತದೆ.
ಅರ್ಹತೆಗಳು ಏನು?
- ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವವರು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
- ಅರ್ಜಿದಾರರ ಅಭ್ಯರ್ಥಿಗಳು ಕಾರ್ಮಿಕರ ಮಕ್ಕಳು ಆಗಿರಬೇಕು.
- ಹಾಗೆ ಅವರು ಪ್ರೌಢಶಾಲೆಯಿಂದ ಹಿಡಿದು ಸ್ನಾತಕೋತ್ತರ ಮಟ್ಟದವರೆಗೆ ವ್ಯಾಸಂಗವನ್ನು ಮಾಡುತ್ತ ಇರಬೇಕು.
- ಒಂದು ಕುಟುಂಬದಲ್ಲಿ ಒಬ್ಬ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವನ್ನು ನೀಡಲಾಗುತ್ತದೆ.
- ಅರ್ಜಿದಾರ ಅಭ್ಯರ್ಥಿಗಳ ಹಿಂದಿನ ತರಗತಿಯಲ್ಲಿ 50% ಗಿಂತ ಹೆಚ್ಚಿನ ಅಂಕಗಳನ್ನು ಪಡೆದಿರಬೇಕು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಮೊಬೈಲ್ ನಂಬರ್
- ಇಮೇಲ್ ಐಡಿ
- ಇತ್ತೀಚಿನ ಭಾವಚಿತ್ರ
- ಪೋಷಕರ ಕಾರ್ಮಿಕರ ಕಾರ್ಡ್
- ಶೈಕ್ಷಣಿಕ ಪ್ರಮಾಣ ಪತ್ರಗಳು
ಅರ್ಜಿಯನ್ನು ಸಲ್ಲಿಸುವುದು ಹೇಗೆ?
- ಈಗ ನೀವು ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ನಾವು ಈ ಕೆಳಗೆ ನೀಡಿರುವ ಅಧಿಕೃತ ಲಿಂಕಿನ ಮೇಲೆ ಕ್ಲಿಕ್ ಮಾಡು ಮಾಡಿಕೊಂಡು ಮುಂದುವರಿಯಬೇಕಾಗುತ್ತದೆ.
- ಆನಂತರ ನೀವು ಮೊದಲ ಬಾರಿಗೆ ಆ ಒಂದು ವೆಬ್ಸೈಟ್ನಲ್ಲಿ ಭೇಟಿ ಮಾಡುತ್ತಾ ಇದ್ದರೆ ಮೊದಲು ಹೊಸ ಖಾತೆಯನ್ನು ರಚಿಸು ಮೇಲೆ ಕ್ಲಿಕ್ ಮಾಡಿ. ಅಲ್ಲಿ ಅಗತ್ಯವಿರುವ ದಾಖಲೆಗಳನ್ನು ಭರ್ತಿ ಮಾಡಿ. ರಿಜಿಸ್ಟರ್ ಮಾಡಿಕೊಳ್ಳಬೇಕು.
- ಆನಂತರ ನೀವು ಅದರಲ್ಲಿ ನಿಮ್ಮ ಲಾಗಿನ್ ಮಾಡಿಕೊಂಡು ನಿಮ್ಮ ವೈಯಕ್ತಿಕ ದಾಖಲೆಗಳು ಹಾಗೂ ಶೈಕ್ಷಣಿಕ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಅಪ್ಲೋಡ್ ಮಾಡಿ.
- ನೀವು ಎಲ್ಲಾ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿಕೊಂಡ ನಂತರ ನೀವು ಈ ಒಂದು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿಕೊಂಡು ಈಗ ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ.
LINK : Apply Now