Land Digital Skech In Mobile: ರೈತರಿಗೆ ಸಿಹಿ ಸುದ್ದಿ? ಒಂದು ನಿಮಿಷದಲ್ಲಿ ನಿಮ್ಮ ಜಮೀನಿನ ನಕ್ಷೆ  ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ.

Land Digital Skech In Mobile: ರೈತರಿಗೆ ಸಿಹಿ ಸುದ್ದಿ? ಒಂದು ನಿಮಿಷದಲ್ಲಿ ನಿಮ್ಮ ಜಮೀನಿನ ನಕ್ಷೆ  ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ.

ಈಗ ರೈತರು ತಮ್ಮ ಜಮೀನಿನ ನಕ್ಷೆ ಅಥವಾ ಸ್ಕೆಚ್ ಅನ್ನು ಪಡೆದುಕೊಳ್ಳಲು ಈಗ ಯಾರ ಕಾಲಿಗೂ ಕೂಡ ಬೀಳುವ ಅವಶ್ಯಕತೆ ಇಲ್ಲ. ಈಗ ತಂತ್ರಜ್ಞಾನ ಎಷ್ಟರ ಮಟ್ಟಿಗೆ ಮುಂದುವರೆದಿದೆ ಎಂದು ಹೇಳಿದರೆ ನೀವು ಈಗ ಕುಳಿತಲ್ಲಿ ನಿಮ್ಮ ಸ್ಮಾರ್ಟ್ ಫೋನ್ ಮೂಲಕ ಜಮೀನಿನ ಸಂಪೂರ್ಣ ನಕ್ಷೆಗಳನ್ನು ಈಗ ಕೇವಲ ಒಂದೇ ನಿಮಿಷದಲ್ಲಿ ನೋಡಬಹುದು. ಹಾಗೆ ಅದನ್ನು ಡೌನ್ಲೋಡ್ ಕೂಡ ಮಾಡಿಕೊಳ್ಳಬಹುದಾಗಿದೆ.

Land Digital Skech In Mobile

ಹಾಗಿದ್ದರೆ ಸ್ನೇಹಿತರೆ ಈಗ ನೀವು ಕೂಡ ಯಾವ ರೀತಿಯಾಗಿ ಈ ಒಂದು ವೆಬ್ ಸೈಟ್ ಗೆ ಹೋಗಬೇಕು ಹಾಗೂ ಏನೆಲ್ಲಾ ಹಂತಗಳನ್ನು ಅನುಸರಿಸಬೇಕು. ಅದೇ ರೀತಿಯಾಗಿ ಆ ಒಂದು ಕಲರ್ ಸ್ಕೆಚ್ ಅನ್ನು ಯಾವ ರೀತಿಯಾಗಿ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.

ಈ  ಸ್ಕೆಚ್ ಅನ್ನು ಪಡೆದುಕೊಳ್ಳುವುದು ಹೇಗೆ?

ಈಗ ನೀವೇನಾದರೂ ಈ ಒಂದು ಸರ್ಕಾರದ ಭೂಮಿ ತಂತ್ರಾಂಶದ ಮೂಲಕ ಈ ಸ್ಕೆಚ್ ಅನ್ನು ಪಡೆದುಕೊಳ್ಳಲು ಈಗ ಈ ಕೆಳಗೆ ನೀಡಲು ಪ್ರತಿಯೊಂದು ಹಂತಗಳನ್ನು ನೀವು ಅನುಸರಿಸಬೇಕಾಗುತ್ತದೆ.

  • ಮೊದಲಿಗೆ ಈಗ ನಾವು ಈ ಕೆಳಗೆ ನೀಡಿರುವ ಅಧಿಕೃತ ವೆಬ್ ಸೈಟನ್ನು ನಿಮ್ಮ ಮೊಬೈಲ್ ನಲ್ಲಿ ಓಪನ್ ಮಾಡಿಕೊಳ್ಳಿ.
  • ಆನಂತರ ಅದರಲ್ಲಿ ನೀವು ಪೇಜ್ ಓಪನ್ ಆದ ನಂತರ ನಿಮಗೆ ಹಲವಾರು ಆಯ್ಕೆಗಳು ಕಾಣುತ್ತವೆ. ಅದರಲ್ಲಿ ನೀವು ಸರ್ವಿಸ್ ಎಂಬ ಆಯ್ಕೆ ಮೇಲೆ ನೀವು ಕ್ಲಿಕ್ ಮಾಡಿಕೊಂಡು ಮುಂದುವರಿಯಬೇಕಾಗುತ್ತದೆ.
  • ತದನಂತರ ನೀವು ನಿಮ್ಮ ಗ್ರಾಮ ಹುಡುಕಾಟ ಬಾಕ್ಸ್ ಬರುತ್ತದೆ. ಅದರಲ್ಲಿ ನಿಮ್ಮ ಊರಿನ ಹೆಸರನ್ನು ಟೈಪ್ ಮಾಡಿಕೊಂಡು ಕೆಳಗೆ ಬರುವ ಬಾಕ್ಸ್ ಅಲ್ಲಿ ನಿಮ್ಮ ಜಿಲ್ಲೆಯ ತಾಲೂಕು ಮತ್ತು ಹೋಬಳಿ ಗಳನ್ನು ಸರಿಯಾದ ರೀತಿಯಲ್ಲಿ ಸೆಲೆಕ್ಟ್ ಮಾಡಿಕೊಳ್ಳಿ.
  • ತದನಂತರ ನೀವು ನಿಮ್ಮ ಜಮೀನಿನ ಸರ್ವೆ ನಂಬರ್ ಹಾಗೂ ಈಸಾ ನಂಬರ್ಗಳನ್ನು ಆಯ್ಕೆ ಮಾಡಿಕೊಂಡು ಸರ್ಚ್ ಮಾಡಿಕೊಳ್ಳಿ.
  • ನೀವು ಈ ಎಲ್ಲಾ ದಾಖಲೆಗಳನ್ನು ನೀಡಿದ ನಂತರ ನಿಮ್ಮ ಮುಂದೆ ಈ ಸ್ಕೆಚ್ ನಿಮಗೆ ದೊರೆಯುತ್ತದೆ.
  • ಹಾಗೆ ನೀವು ಸರ್ವೆ ನಂಬರ್ ಯಾರ ಹೆಸರಿನಲ್ಲಿ ಇರುತ್ತದೆ ಎಷ್ಟು ಎಕರೆ ಜಮೀನಿದೆ ಎಂಬ ಪಟ್ಟಿ ನಿಮ್ಮ ಮುಂದೆ ದೊರೆಯುತ್ತದೆ. ಆನಂತರ ಕೆಳಗೆ ನ್ಯೂ ಸ್ಕೆಚ್  ಮ್ಯಾಪ್ ಎಂಬ ಆಯ್ಕೆ ಇರುತ್ತದೆ.
  • ಆನಂತರ ಅದರ ಮೇಲೆ ನೀವು ಕ್ಲಿಕ್ ಮಾಡಿಕೊಂಡರೆ ಸಾಕು ನಿಮ್ಮ ಜಮೀನಿನ ಆಕಾರ ಸಂಪೂರ್ಣ ಸ್ಕೆಚ್ ಕಲರ್ ಫುಲ್ ಆಗಿ ನಿಮಗೆ ದೊರೆಯುತ್ತದೆ.
  • ಅಷ್ಟೇ ಅಲ್ಲದೆ ಇದನ್ನು ನೀವು ಸಂಪೂರ್ಣವಾಗಿ ನೋಡಬಹುದು ಹಾಗೆ ಸ್ಕ್ರೀನ್ ಶಾಟ್ ಅಥವಾ ಡೌನ್ಲೋಡ್ ಕೂಡ ಮಾಡಿಕೊಳ್ಳಬಹುದು.

LINK : Download Now 

ಅದೇ ರೀತಿಯಾಗಿ ಸ್ನೇಹಿತರೆ ಈಗ ಇಲ್ಲಿ ಸಿಗುವಂತಹ ಈ ಒಂದು ಮಾಹಿತಿಗಾಗಿ ಮಾತ್ರ. ಇದು ಕೋರ್ಟ್ ಕೆಲಸಗಳಿಗೆ ಅಥವಾ ಲೋನ್ ಗಳನ್ನು ಪಡೆಯಲು ನೀವು ದೃಢೀಕರಣ ನಕ್ಷೆ ಪಡೆದುಕೊಳ್ಳಬೇಕೆಂದರೆ ನೀವು ನಿಮ್ಮ ನಾಡಕಚೇರಿ ಅಥವಾ ಸರ್ವೆ ಆಫೀಸ್ ಗೆ ಭೇಟಿಯನ್ನು ನೀಡಿ. ಅರ್ಜಿಯನ್ನು ಸಲ್ಲಿಕೆ ಮಾಡಬೇಕಾಗುತ್ತದೆ.

Leave a Comment