Mahila Samruddi Yojane For Womans: ಸ್ವಯಂ ಉದ್ಯೋಗಕ್ಕೆ ಈಗ ಮಹಿಳೆಯರಿಗೆ 1.40 ಲಕ್ಷದವರೆಗೆ ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ.
ಈಗ ನಮ್ಮ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದಂತ ಯೋಜನೆ ಎಂದರೆ ಅದು ಮಹಿಳಾ ಸಮೃದ್ಧಿ ಯೋಜನೆ ಈಗ ಈ ಒಂದು ಯೋಜನೆಯ ವಿಶೇಷವಾಗಿ ಗ್ರಾಮೀಣ ಮತ್ತು ಹಿಂದುಳಿದ ವರ್ಗಗಳ ಮಹಿಳೆಯರು ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಮುಂದುವರೆಯಲು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಒಂದು ಯೋಜನೆಯನ್ನು ಜಾರಿಗೆ ಮಾಡಲಾಗಿದೆ. ಈ ಒಂದು ಯೋಜನೆಯು ಮಹಿಳೆಯರಿಗೆ ಅತ್ಯಂತ ಕಡಿಮೆ ಬಡ್ಡಿ ದರಗಳಲ್ಲಿ ಸಾಲವನ್ನು ಒದಗಿಸುವುದರ ಮೂಲಕ ಅವರನ್ನು ಸಮಾಜದ ದೃಷ್ಟಿಗೆ ತರಲು ಈ ಒಂದು ಯೋಜನೆಯಿಂದ ಉತ್ತಮವಾದ ವೇದಿಕೆಯನ್ನು ಒದಗಿಸುತ್ತದೆ.

ಈಗ ನೀವು ಕೂಡ ಈ ಒಂದು ಯೋಜನೆಗಳ ಮೂಲಕ ಸಹಾಯಧನವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈಗ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ. ಈಗ ಈ ಒಂದು ಲೇಖನದಲ್ಲಿ ಈ ಒಂದು ಯೋಜನೆ ಉದ್ದೇಶ ಏನು? ಅರ್ಹತೆಗಳು ಏನು? ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕು ಮತ್ತು ಅಗತ್ಯ ದಾಖಲೆಗಳು ಏನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಇದೆ.
ಯೋಜನೆಯ ಉದ್ದೇಶ ಏನು?
ಈಗ ಈ ಒಂದು ಮಹಿಳಾ ಸಮೃದ್ಧಿ ಯೋಜನೆಯನ್ನು ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಡಿಯಲ್ಲಿ ಬರುವಂತಹ ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದಿಂದ ಏಕ ಪ್ರಾರಂಭ ಮಾಡಲಾಗಿದೆ. ಅಷ್ಟೇ ಅಲ್ಲದೆ ಈಗ ಈ ಒಂದು ಯೋಜನೆ ಉದ್ದೇಶವು ಏನೆಂದರೆ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳ ಮಹಿಳೆಯರಲ್ಲಿ ಉದ್ಯಮಶೀಲತೆಯ ಮನೋಭಾವವನ್ನು ಹೆಚ್ಚಿಸುವುದು ಈ ಒಂದು ಯೋಜನೆಯ ಉದ್ದೇಶ.
ಹಾಗೆ ಈಗ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಮಹಿಳೆಯರಿಗೆ ಆರ್ಥಿಕವಾಗಿ ಸ್ವಾತಂತ್ರ್ಯವನ್ನು ಒದಗಿಸುವುದು. ಈ ಒಂದು ಯೋಜನೆ ಅತ್ಯಂತ ಮುಖ್ಯವಾದ ಅಂತಹ ಉದ್ದೇಶವಾಗಿದೆ.
ಆರ್ಥಿಕ ಪ್ರಯೋಜನಗಳು ಮತ್ತು ಸಾಲದ ವಿವರಗಳು ಏನು?
- ಈಗ ಮಹಿಳಾ ಸಮೃದ್ಧಿ ಯೋಜನೆಯು ಮಹಿಳೆಯರಿಗೆ ತಮ್ಮ ವ್ಯವಹಾರಗಳನ್ನು ಪ್ರಾರಂಭಿಸಲು ಅಥವಾ ವಿಸ್ತರಣೆ ಮಾಡಲು ಈಗ ಆರ್ಥಿಕ ಬೆಂಬಲವನ್ನು ನೀಡುತ್ತಾ ಇದೆ.
- ಈಗ ಈ ಒಂದು ಯೋಜನೆ ಅಡಿಯಲ್ಲಿ ಈಗ ಅವರು 1.4 ಲಕ್ಷದವರೆಗೆ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದು.
- ಹಾಗೆ ಅವರು ಈಗ ವಾರ್ಷಿಕವಾಗಿ 6% ನಿಂದ ಬಡ್ಡಿದರವನ್ನು ಅವರು ತೆಗೆದುಕೊಂಡ ಸಾಲಕ್ಕೆ ನೀಡಬೇಕಾಗುತ್ತದೆ.
- ಆನಂತರ ಒಂದು ಸಾಲವನ್ನು ಈಗ ನೀವು ಗರಿಷ್ಠ ಮೂರು ವರ್ಷಗಳ ಒಳಗೆ ತ್ರೈಮಾಸಿಕ ಕಂತುಗಳಲ್ಲಿ ಈಗ ಮರುಪಾವತಿಯನ್ನು ಮಾಡಬೇಕಾಗುತ್ತದೆ.
ಸ್ವಸಹಾಯ ಗುಂಪುಗಳಿಗೆ ನೆರವು
ಈಗ ಈ ಒಂದು ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಹಣಕಾಸು ನೆರವು ಮಾತ್ರ ಅಷ್ಟೇ ಅಲ್ಲದೆ ಅವರಿಗೆ ಕೌಶಲ್ಯ ಅಭಿವೃದ್ಧಿ ಅವಕಾಶವನ್ನು ನೀಡಲಾಗುತ್ತದೆ. ಅದೇ ರೀತಿಯಾಗಿ ಈಗ ಸುಮಾರು 20 ಜನ ಮಹಿಳೆಯರ ಗುಂಪನ್ನು ಗುರುತಿಸಿ ಅವರಿಗೆ ಸೂಕ್ತ ಚಟುವಟಿಕೆಗಳಿಗೆ ತರಬೇತಿಯನ್ನು ಕೂಡ ನೀಡಲಾಗುತ್ತದೆ.
ಅರ್ಹತೆಗಳು ಏನು?
- ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡುವ ಮಹಿಳೆಯ ವಯಸ್ಸು 18ರಿಂದ 55 ವರ್ಷದ ಒಳಗೆ ಇರಬೇಕು.
- ಹಾಗೆ ಆ ಒಂದು ಮಹಿಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸೂಚಿಸಿದಂತಹ ವರ್ಗಗಳಿಗೆ ಸೇರಿದವರು ಆಗಿರಬೇಕು.
- ಹಾಗೆ ಭಾರತದ ಕಾಯಂ ನಿವಾಸಿ ಆಗಿರಬೇಕು.
- ಆನಂತರ ಅವರ ಆದಾಯದ ಮಿತಿ 3 ಲಕ್ಷಕ್ಕಿಂತ ಕಡಿಮೆ ಇರಬೇಕು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಖಾತೆ ವಿವರಗಳು
- ಇತ್ತೀಚಿನ ಭಾವಚಿತ್ರ
- ಸ್ವಸಹಾಯ ಗುಂಪಿನ ಸದಸ್ಯತ್ವ ಐಡಿ
ಅರ್ಜಿ ಸಲ್ಲಿಸುವುದು ಹೇಗೆ?
- ಈಗ ನೀವೇನಾದರೂ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ನಾವು ಈ ಕೆಳಗೆ ನೀಡಿರುವ ಅಧಿಕೃತ ವೆಬ್ಸೈಟ್ ಗೆ ಮೊದಲು ಭೇಟಿಯನ್ನು ನೀಡಿ.
- ಆನಂತರ ನೀವು ಅದರಲ್ಲಿ ಯೋಜನೆಗೆ ಸಂಬಂಧಿಸಿದ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
- ಆನಂತರ ನೀವು ಅದಕ್ಕೆ ಬೇಕಾಗುವಂತ ಪ್ರತಿಯೊಂದು ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಬರ್ತಿ ಮಾಡಿ.
- ಆನಂತರ ಅದಕ್ಕೆ ಬೇಕಾಗಿರುವಂತ ಪ್ರತಿಯೊಂದು ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ, ಅಪ್ಲೋಡ್ ಮಾಡುವುದರ ಮೂಲಕ ನೀವು ಕೂಡ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಮಾಡಬಹುದು.
LINK : Apply Now