Post Office MIS Scheme: ಪೋಸ್ಟ್ ಆಫೀಸ್ ನ ಮತ್ತೊಂದು ಹೊಸ ಸ್ಕೀಮ್! ಪ್ರತಿ ತಿಂಗಳ 5,500 ಹಣ ಪಡೆಯಿರಿ.
ಈಗ ನಿಮ್ಮ ಹತ್ತಿರ ಇರುವಂತ ಹಣವನ್ನು ನೀವು ಎಲ್ಲಿ ಹೂಡಿಕೆ ಮಾಡುವುದು ಎಂಬ ಗೊಂದಲದಲ್ಲಿದ್ದರೆ ಈಗ ಶೇರು ಮಾರುಕಟ್ಟೆ ರಿಸ್ಕ್ ಬೇಡ. ಆದರೆ ಈಗ ಬ್ಯಾಂಕ್ ಬಡ್ಡಿಯಿಂದ ಹೆಚ್ಚಿನ ಲಾಭ ಬೇಕು ಎನ್ನುವವರಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಒಮ್ಮೆ ನೀವು ನಿಮ್ಮ ಉಳಿತಾಯದ ಹಣವನ್ನು ಇಲ್ಲಿ ಇಟ್ಟರೆ ಪ್ರತಿ ತಿಂಗಳು ನೀವು ಹಣವನ್ನು ಈಗ ನೀವು ಪಡೆದುಕೊಳ್ಳಬಹುದು.

ಈಗ ನೀವು ಕೂಡ ಈ ಒಂದು ಅಂಚೆ ಇಲಾಖೆಯಲ್ಲಿ ಇರುವಂತ ಈ ಒಂದು ಯೋಜನೆ ಬಗ್ಗೆ ಈಗ ಸಂಪೂರ್ಣ ಮಾಹಿತಿ ಹಾಗೂ ಎಷ್ಟು ಹಣವನ್ನು ಹೂಡಿಕೆ ಮಾಡಬಹುದು. ಹಾಗೆ ಏನೆಲ್ಲಾ ಹೂಡಿಕೆ ಮಾಡಬಹುದು ಮತ್ತು ಆದಾಯದ ಲೆಕ್ಕಾಚಾರದ ಬಗ್ಗೆ ಸಂಪೂರ್ಣವಾದ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.
ಅಂಚೆ ಕಚೇರಿ MIS ಯೋಜನೆ
ಈಗ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವಂತ ಅತ್ಯಂತ ಸುರಕ್ಷಿತ ಯೋಜನೆ ಹಾಗೂ ಇದರಲ್ಲಿ ನೀವು ಪ್ರತಿ ತಿಂಗಳು ಹಣ ಹೂಡಿಕೆ ಮಾಡುವ ಅವಶ್ಯಕತೆ ಇಲ್ಲ ಬದಲಾಗಿ ಒಮ್ಮೆ ದೊಡ್ಡ ಮೊತ್ತವನ್ನು ನೀವು ಠೇವಣಿ ನೀಡಬೇಕಾಗುತ್ತದೆ. ಆ ಒಂದು ಹಣದ ಮೇಲೆ ಈಗ ನೀವು ಸರ್ಕಾರವು ನಿಮಗೆ ಪ್ರತಿ ತಿಂಗಳು ಬಡ್ಡಿಯನ್ನು ನೀಡುತ್ತಾ ಇರುತ್ತದೆ. 5 ವರ್ಷಗಳ ನಂತರ ನೀವು ಹೂಡಿಕೆ ಮಾಡಿದ ಹಣಪೂರ್ಣ ಹಣವನ್ನು ಯಾವುದೇ ಕಡಿತವಿಲ್ಲದೆ ನೀವು ವಾಪಸ್ ಪಡೆದುಕೊಳ್ಳಬಹುದಾಗಿದೆ.
ಎಷ್ಟು ಹೂಡಿಕೆ ಅನ್ನು ಮಾಡಬಹುದಾಗಿದೆ
ಈಗ ಸ್ನೇಹಿತರೆ ನೀವು ಕನಿಷ್ಠ 1000 ದಿಂದ ಈ ಒಂದು ಯೋಜನೆ ಅಡಿಯಲ್ಲಿ ಖಾತೆಯನ್ನು ತೆರೆಯಬಹುದು. ನೀವು ಒಬ್ಬರೇ ಖಾತೆ ತೆರೆಯುವುದಾದರೆ ಗರಿಷ್ಠ 9 ಲಕ್ಷ ಹೂಡಿಕೆ ಮಾಡಬಹುದು. ಒಂದು ವೇಳೆ ನೀವೇನಾದರೂ ಪತಿ-ಪತ್ನಿ ಜೊತೆ ಸೇರಿ ಜಂಟಿ ಖಾತೆ ತೆರೆದರೆ 15 ಲಕ್ಷದವರೆಗೆ ಹೂಡಿಕೆಯನ್ನು ಮಾಡಬಹುದಾಗಿದೆ.
ಹೂಡಿಕೆ ಮತ್ತು ಆದಾಯದ ಮಾಹಿತಿ
ಈಗ ನೀವೇನಾದರೂ 9,00,000 ಹಣವನ್ನು ಹೂಡಿಕೆ ಮಾಡಿದರೆ ವಾರ್ಷಿಕವಾಗಿ ನಮಗೆ 7.4% ಬಡ್ಡಿ ದರದಲ್ಲಿ ಮಾಸಿಕ ಆದಾಯ 5,500 ಆಗುತ್ತದೆ.
ಅದೇ ರೀತಿಯಾಗಿ ನೀವೇನಾದರೂ 15 ಲಕ್ಷ ಹೂಡಿಕೆಯನ್ನು ಮಾಡಿದರೆ ವಾರ್ಷಿಕ ಬಡ್ಡಿದರ 7.4% ಬಡ್ಡಿ ದರದಲ್ಲಿ ಪ್ರತಿ ತಿಂಗಳು 9,250 ಹಣವನ್ನು ನೀವು ಪಡೆದುಕೊಳ್ಳಬಹುದು.
ಖಾತೆಯನ್ನು ತೆರೆಯುವುದು ಹೇಗೆ?
ಈಗ ನೀವು ಕೂಡ ಈ ಒಂದು ಯೋಜನೆಗಳಿಗೆ ಹೂಡಿಕೆಯನ್ನು ಮಾಡಬೇಕೆಂದರೆ ನಿಮ್ಮ ಹತ್ತಿರ ಇರುವಂತಹ ಅಂಚೆ ಕಚೇರಿಗೆ ಭೇಟಿ ನೀಡಿ. ಅದರಲ್ಲಿ ನೀವು ನಿಮ್ಮ ವೈಯಕ್ತಿಕ ದಾಖಲೆಗಳನ್ನು ಅವರಿಗೆ ನೀಡುವುದರ ಮೂಲಕ ಒಂದು ಉಳಿತಾಯ ಖಾತೆ ಮತ್ತು MIS ಖಾತೆಯನ್ನು ತೆರೆಯಬಹುದು. ನೀವು ಠೇವಣಿಯನ್ನು ಮಾಡಿದ ನಂತರ ಅಂದರೆ ಮುಂದಿನ ತಿಂಗಳಿನಿಂದಲೇ ಹಣ ನಿಮಗೆ ಜಮಾ ಆಗಲು ಪ್ರಾರಂಭವಾಗುತ್ತದೆ.