RTC Crop Name Changed Update News: ನಿಮ್ಮ ಪಹಣಿಯಲ್ಲಿ ಬೆಳೆ ಮಾಹಿತಿ ತಪ್ಪಾಗಿದ್ದರೆ ಅದನ್ನು ಸರಿಪಡಿಸುವುದು ಹೇಗೆ?

RTC Crop Name Changed Update News: ನಿಮ್ಮ ಪಹಣಿಯಲ್ಲಿ ಬೆಳೆ ಮಾಹಿತಿ ತಪ್ಪಾಗಿದ್ದರೆ ಅದನ್ನು ಸರಿಪಡಿಸುವುದು ಹೇಗೆ?

ಈಗ ರೈತರ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ಮಾಹಿತಿಗೂ ಹಾಗೂ ಪಹಣಿಯಲ್ಲಿರುವಂತ ದಾಖಲಾದ ಬೆಳೆ ಮಾಹಿತಿಗಳು ಕೂಡ ಹೊಂದಾಣಿಕೆ ಆಗದೆ ಇದ್ದರೆ ಅಥವಾ ತಪ್ಪಾದ ಬೆಳೆ ಮಾಹಿತಿ ಪಹಣಿಯಲ್ಲಿ ದಾಖಲಾಗಿದ್ದರೆ ಇದನ್ನು ಈಗ ನೀವು ಯಾವ ರೀತಿಯಾಗಿ ಸರಿಪಡಿಸಿಕೊಳ್ಳಬೇಕೆಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈಗ ಈ ಒಂದು ಲೇಖನದಲ್ಲಿ ನಿಮಗೆ ನೀಡಲಾಗುತ್ತದೆ.

RTC Crop Name Changed Update News

ಈಗ ನಮ್ಮ ರಾಜ್ಯದಲ್ಲಿ ಕೃಷಿ ಜಮೀನಿನಲ್ಲಿ ಬೆಳೆದಿರುವಂತಹ ಬೆಳೆಗಳು ಮಾಹಿತಿಗಳನ್ನು ಈಗ ಅಧಿಕೃತವಾಗಿ ಪಹಣಿ ಅಥವಾ ಉತಾರ ಇಲ್ಲವೇ RTC ದಾಖಲಿಸಲು ಈಗ ಕೃಷಿ ಮತ್ತು ಕಂದಾಯ ಇಲಾಖೆಯ ಮೂಲಕ ಪ್ರತಿ ಹಂಗಾಮಿನಲ್ಲಿ ಮೊಬೈಲ್ ಅಪ್ಲಿಕೇಶನ್ ನ ಮೂಲಕ ಬೆಳೆ ಸಮೀಕ್ಷೆಯನ್ನು ಮಾಡಲು ಈಗ ಸರಕಾರ ಮಾಹಿತಿಯನ್ನು ನೀಡಿದೆ.

ಈಗ ಈ ಒಂದು ಮಾಹಿತಿಯನ್ನು ಆಧರಿಸಿ ಅಂದರೆ ವಿಧಾನವನ್ನು ಅನುಸರಿಸಿ ದಾಖಲೆ ಮಾಡಿದಂತಹ ಮಾಹಿತಿಗಳು ತಪ್ಪಾಗಿ ನಮೂದಿಸಿ ತಪ್ಪಾದ ಬೆಳೆ ಮಾಹಿತಿ ದಾಖಲಾದರೆ ಆ ಒಂದು ಮಾಹಿತಿಯನ್ನು ನಿಮಗೆ ಯಾವ ರೀತಿಯಾಗಿ ಸರಿಪಡಿಸಿಕೊಳ್ಳಬಹುದು ಎಂಬುದರ ಬಗ್ಗೆ ಸಂಪೂರ್ಣವಾದಂತ ಮಾಹಿತಿಯನ್ನು ನಿಮಗೆ ಈ ಲೇಖನದಲ್ಲಿ ನೀಡುತ್ತಾ ಹೋಗುತ್ತೇವೆ. ಈಗ ರೈತರು ಈ ಒಂದು ಪಹಣಿಯಲ್ಲಿ ದಾಖಲಾದ ಮಾಹಿತಿಯನ್ನು ತಮ್ಮ ಮನೆಯಲ್ಲಿ ಕುಳಿತು ಮೊಬೈಲ್ ಮೂಲಕ ಚೆಕ್ ಮಾಡಿ ಅವುಗಳನ್ನು ಆನ್ಲೈನ್ ಮೂಲಕ ಪರಿಶೀಲನೆ ಮಾಡಬಹುದಾಗಿದೆ.

ಪಹಣಿಯಲ್ಲಿ ಬೆಳೆ ಮಾಹಿತಿ ಸರಿಯಾಗಿ ದಾಖಲಿಸಲು ಮುಖ್ಯ ಕಾರಣವೇನು?

ಈಗ ರೈತರು ತಮ್ಮ ಹೆಸರಿನಲ್ಲಿರುವ ಕೃಷಿ ಜಮೀನಲ್ಲಿ ಬೆಳೆದಿರುವ ಬೆಳೆ ಮಾಹಿತಿಗಳು ಸರಿಯಾಗಿ ದಾಖಲಿಸುವುದು ಏಕೆಂದರೆ ಈಗ ಸರ್ಕಾರಿ ಯೋಜನೆಯ ಪ್ರಯೋಜನಗಳು ತಪ್ಪಿ ಹೋಗಬಾರದು ಎಂಬ ಉದ್ದೇಶದಿಂದ ಈ ಒಂದು ಮಾಹಿತಿಯನ್ನು ನೀಡಲಾಗುತ್ತಿದೆ.

ಈಗ ಈ ಒಂದು ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ರಾಗಿ ಸೇರಿದಂತೆ ಇನ್ನಿತರ ಎಲ್ಲಾ ಬೆಳೆಗಳನ್ನು ಮಾರಾಟ ಮಾಡಲು ಪಹಣಿಯಲ್ಲಿ ಸರಿಯಾದ ಬೆಳೆ ಮಾಹಿತಿ ದಾಖಲಾಗಿರುವುದು ಕಡ್ಡಾಯವಾಗಿರುತ್ತದೆ. ಒಂದು ವೇಳೆ ನಿಮ್ಮ ಪಹಣಿಯಲ್ಲಿ ತಪ್ಪಾದ ಬೆಳೆ ದಾಖಲಾಗಿದ್ದರೆ ಈ ಒಂದು ಯೋಜನೆ ಪ್ರಯೋಜನ ಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲ.

ಅದೇ ರೀತಿಯಾಗಿ ಬೆಳೆ ವಿಮೆ ಪರಿಹಾರ ಹಣವನ್ನು ಪಡೆಯುವಂತಹ ರೈತರು ಈಗ ಮುಂಗಾರು ಹಂಗಾಮಿನಲ್ಲಿ ಅರ್ಜಿ ಸಲ್ಲಿಸುವ ಸಮಯದಲ್ಲಿ ಮೆಕ್ಕೆಜೋಳಕ್ಕೆ ಬೆಳೆ ವಿಮೆ ಪಾವತಿ ಮಾಡಿ ಅರ್ಜಿ ಸಲ್ಲಿಕೆ ಮಾಡಿದ್ದರೆ ಬೆಳೆ ಸಮೀಕ್ಷೆಯ ಮೂಲಕ ಆ ಒಂದು ಹಂಗಾಮದಲ್ಲಿ ಪಹಣಿಯಲ್ಲಿ ಮೆಕ್ಕೆಜೋಳ ಎಂದು ಬೆಳೆಯ ಮಾಹಿತಿ ದಾಖಲಾಗಿದ್ದರೆ ಮಾತ್ರ ಬೆಳೆಯುವ ಪರಿಹಾರ ಜಮಾ ಆಗುತ್ತದೆ. ಒಂದು ವೇಳೆ ತಪ್ಪಾದ ಬೆಳೆ ಮಾಹಿತಿ ದಾಖಲಾಗಿದ್ದರೆ ನಿಮಗೆ ಆಗ ಈ ಒಂದು ತಿದ್ದುಪಡಿ ಮುಖ್ಯ ದಾಖಲೆ ಆಗಿರುತ್ತದೆ.

ಅದೇ ರೀತಿಯಾಗಿ ಈಗ ನಾವು ಸರ್ಕಾರದಿಂದ ಪಡೆಯುವಂತಹ ಪ್ರಯೋಜನಗಳು ಅಂದರೆ ಕೃಷಿಯಾಗಿರಬಹುದು, ತೋಟಗಾರಿಕೆ, ರೇಷ್ಮೆ ಇಲಾಖೆಯಲ್ಲಿ ಪ್ರತಿಯೊಂದು ಸಬ್ಸಿಡಿ ಪಡೆದುಕೊಳ್ಳಲು ಪಹಣಿಯಲ್ಲಿ ಸರಿಯಾದ ಬೆಳೆ ಮಾಹಿತಿ ದಾಖಲೆ ಮಾಡುವುದು ಕಡ್ಡಾಯವಾಗಿದೆ.

ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ?

ಈಗ ಈ ಒಂದು ಹಂತವನ್ನು ಚೆಕ್ ಮಾಡಿಕೊಡಲು ಮೊದಲಿಗೆ ನಾವು ಈ ಕೆಳಗೆ ನೀಡಿರುವ ಅಧಿಕೃತ ವೆಬ್ಸೈಟ್ ಗೆ ಭೇಟಿಯನ್ನು ನೀಡಿ ಇಲ್ಲವೇ ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ ಬೆಳೆ ದರ್ಶಕ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.

ಆನಂತರ ಅದರಲ್ಲಿ ಎರಡು ಆಯ್ಕೆಗಳು ನಿಮಗೆ ಕಾಣುತ್ತೆ ಅದರಲ್ಲಿ ನೀವು ಸರ್ಕಾರಿ ಸಿಬ್ಬಂದಿ ಅಥವಾ ಪ್ರೈವೇಟ್ ರೆಸಿಡೆನ್ಸ್ ಅಂತ ಇರುತ್ತದೆ ಮತ್ತು ರೈತ ಅಂತ ಇರುತ್ತದೆ. ನೀವು ಅದರ ಮೇಲೆ ಕ್ಲಿಕ್ ಮಾಡಿಕೊಂಡು ಮುಂದುವರೆಯಿರಿ.

ಆನಂತರ ಅದರಲ್ಲಿ ನೀವು ನಿಮ್ಮ ಋತು ಮುಂಗಾರು ಎಂದು ಕ್ಲಿಕ್ ಮಾಡಿಕೊಂಡು ನಿಮ್ಮ ಜಿಲ್ಲೆಯ ತಾಲೂಕು ಹೋಬಳಿ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಮಾಹಿತಿಯನ್ನು ಪಡೆದುಕೊಳ್ಳಿ.

ತಪ್ಪಿದ ಮಾಹಿತಿ ಸರಿಪಡಿಸುವುದು ಹೇಗೆ?

ಈಗ ತಪ್ಪಾದ ಮಾಹಿತಿಯನ್ನು ಸರಿಪಡಿಸಬೇಕೆಂದರೆ ಈಗ ನಾವು ಈ ಮೇಲೆ ತಿಳಿಸಿದ ಬೆಳೆ ದರ್ಶಕ ಮೊಬೈಲ್ ಅಪ್ಲಿಕೇಶನ್ ನ ಮೂಲಕ ಚೆಕ್ ಮಾಡಿದಾಗ ತಪ್ಪಾದ ಬೆಳೆ ಮಾಹಿತಿ ದಾಖಲಾಗಿದ್ದರೆ ಬೆಳೆ ವಿವರ ಕೊನೆಯಲ್ಲಿ ಆಕ್ಷೇಪಣೆ ಎಂದು ತೋರಿಸುವ ಬಟನ್ ಮೇಲಿನ ಕ್ಲಿಕ್ ಮಾಡಿ ಆಕ್ಷೇಪಣೆಯನ್ನು ಸಲ್ಲಿಕೆ ಮಾಡಬಹುದು.

ನೀವು ಈ ಒಂದು ಅಪ್ಲಿಕೇಶನ್ ನ ಮೂಲಕ ಅಆಕ್ಷೇಪಣೆಯನ್ನು ಸಲ್ಲಿಸಿದ ನಂತರ ಆ ಒಂದು ಅರ್ಜಿಯನ್ನು ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಾಗಿ ಹೋಗುತ್ತದೆ. ಅದನ್ನು ಪರಿಶೀಲಿಸಿ ನಿಮ್ಮ ಜಮೀನಿನ ಮರು ಸಮೀಕ್ಷೆಗೆ ಖಾಸಗಿ ನಿವಾಸಿಗಳನ್ನು ಮತ್ತೊಮ್ಮೆ ಕಳುಹಿಸಿ ಅದನ್ನು ಸರಿಪಡಿಸಲಾಗುತ್ತದೆ.

ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬೇಕೆಂದರೆ ನೀವು ನಿಮ್ಮ ಹೋಬಳಿ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ಮಾಡಿ. ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.

Link : Download Now 

Leave a Comment