Udyogini Subsidy Scheme: ಮಹಿಳಾ ನಿಗಮದಿಂದ ಈಗ ಮಹಿಳೆಯರಿಗೆ ಸ್ವಂತ ಉದ್ಯಮ ಪ್ರಾರಂಭ ಮಾಡಲು 1.5 ಲಕ್ಷ ಸಬ್ಸಿಡಿ! ಹಾಗೆ 3 ಲಕ್ಷದವರೆಗೆ ಸಾಲ ಸೌಲಭ್ಯ!
ಈಗ ನಮ್ಮ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಈಗ 2025 26 ನೇ ಶೈಕ್ಷಣಿಕ ವರ್ಷಕ್ಕೆ ಉದ್ಯೋಗಿನಿ ಯೋಜನೆ ಅಡಿಯಲ್ಲಿ ಈಗ ಸ್ವಂತ ಉದ್ಯಮವನ್ನು ಪ್ರಾರಂಭ ಮಾಡಲು ಈಗ 50% ಸಬ್ಸಿಡಿ ನೀಡಲಾಗುತ್ತಿದೆ. ಅದೇ ರೀತಿಯಾಗಿ ಈಗ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಯ ಮಹಿಳೆಯರಿಗೆ ಈಗ 1.5 ಲಕ್ಷದವರೆಗೆ ಸಬ್ಸಿಡಿ ಹಾಗೂ 1.5 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

ಅದೇ ರೀತಿಯಾಗಿ ಈಗ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು. ನೀವು ಕೂಡ ಈಗ ಕೂಡಲೇ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಈಗ ಈ ಒಂದು ಯೋಜನೆಯು ಬ್ಯೂಟಿ ಪಾರ್ಲ,ರ್ ಹೋಂ ಸಲೂನ್, ಸಾಬೂನು ತಯಾರಿಕೆ ಹಾಗೂ ಇನ್ನೂ ಹಲವಾರು ರೀತಿಯ ಸಣ್ಣ ಉದ್ಯೋಗಗಳಿಗೆ ಆರ್ಥಿಕ ಬೆಂಬಲವನ್ನು ಇದು ನೀಡುತ್ತಾ ಇದೆ.
ಇದರ ಮೂಲಕ ಈಗ ಮಹಿಳೆಯರು ಮನೆಯಿಂದಲೇ ಆದಾಯವನ್ನು ಉತ್ಪಾದಿಸಿ ಅವರು ಕೂಡ ಸ್ವಂತ ಉದ್ಯಮವನ್ನು ಪ್ರಾರಂಭ ಮಾಡಬಹುದು. ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಈ ಒಂದು ಲೇಖನವನ್ನು ಈಗ ಸಂಪೂರ್ಣವಾಗಿ ಓದಿಕೊಂಡು ನೀವು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ ಸಂಪೂರ್ಣ ಸಬ್ಸಿಡಿ ಅನ್ನು ಪಡೆದುಕೊಳ್ಳಬಹುದು.
ಉದ್ಯೋಗಿನಿ ಯೋಜನೆಯೆಂದರೆ ಏನು?
ಈಗ ಈ ಒಂದು ಉದ್ಯೋಗಿನಿ ಯೋಜನೆಯ ಕರ್ನಾಟಕ ಸರ್ಕಾರದ ಮಹಿಳಾ ಅಭಿವೃದ್ಧಿ ನಿಗಮದ ಅಡಿಯಲ್ಲಿ ನಡೆಯುವಂತ ಒಂದು ಪ್ರಮುಖ ಯೋಜನೆಯಾಗಿದೆ. ಇದು ಈಗ ಆರ್ಥಿಕವಾಗಿ ಹಿಂದುಳಿದ ಮಹಿಳೆಯರನ್ನು ಸ್ವಂತ ಉದ್ಯೋಗದಲ್ಲಿ ತಳ್ಳುವಂತ ಗುರಿಯನ್ನು ಇದು ಹೊಂದಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಅಷ್ಟೇ ಅಲ್ಲದೆ ಈ ಒಂದು ಯೋಜನೆಯ ಮೂಲ ಉದ್ದೇಶವೇನೆಂದರೆ ಈಗ ಮಹಿಳೆಯರಿಗೆ ಆರಂಭಿಕ ಬಂಡವಾಳಕ್ಕೆ ಸಹಾಯವನ್ನು ಮಾಡಿ. ಅವರನ್ನು ಸ್ವಂತ ಉದ್ಯೋಗದಲ್ಲಿ ತೊಡಗುವಂತೆ ಮಾಡುವುದು. ಈ ಒಂದು ಯೋಜನೆ ಮುಖ್ಯ ಉದ್ದೇಶವು ಆಗಿದೆ.
ಅರ್ಹತೆಗಳು ಏನು?
- ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವಂತಹ ಮಹಿಳೆಯು 18ರಿಂದ 55 ವರ್ಷದ ಒಳಗೆ ಇರಬೇಕಾಗುತ್ತದೆ.
- ಆನಂತರ ಆ ಒಂದು ಮಹಿಳೆಯು ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕಾಗುತ್ತದೆ.
- ಅದೇ ರೀತಿಯಾಗಿ ಅವರ ವಾರ್ಷಿಕ ಆದಾಯವು 1.5 ಲಕ್ಷಕ್ಕಿಂತ ಕಡಿಮೆ ಇರಬೇಕಾಗುತ್ತದೆ.
- ಆನಂತರ ಅವರು ಸ್ವಂತ ಉದ್ಯೋಗವನ್ನು ಪ್ರಾರಂಭ ಮಾಡಲು ಆಸಕ್ತಿಯನ್ನು ಹೊಂದಿರಲೇಬೇಕು.
ಸಬ್ಸಿಡಿಯ ಮಾಹಿತಿ
ಈಗ ಈ ಒಂದು ಯೋಜನೆ ಅರ್ಜಿಯನ್ನು ಸಲ್ಲಿಸಿದಂತಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ 50% ಸಬ್ಸಿಡಿ ನೀಡಲಾಗುತ್ತದೆ. ಈಗ 3 ಲಕ್ಷ ಘಟಕದ ವೆಚ್ಚಕ್ಕೆ ಈಗ 1.5 ಲಕ್ಷದವರೆಗೆ ಸಬ್ಸಿಡಿ ಪಡೆದುಕೊಳ್ಳಬಹುದು. ಇನ್ನುಳಿದಂತಹ 1.5 ಲಕ್ಷಕ್ಕೆ ಈಗ 5% ಬಡ್ಡಿ ದರದಲ್ಲಿ ಅವರು ಪ್ರತಿ ತಿಂಗಳು 5 ವರ್ಷಗಳ ಕಾಲ ಮರುಪಾವತಿಯನ್ನು ಮಾಡಬಹುದು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಯೋಜನಾ ವರದಿ
- ಬ್ಯಾಂಕ್ ಖಾತೆಯ ವಿವರ
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
ಅರ್ಜಿ ಸಲ್ಲಿಸುವುದು ಹೇಗೆ?
- ಈಗ ನೀವು ಕೂಡ ಈ ಒಂದು ಯೋಜನೆಗೆ ಈಗ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ಈಗ ಸೇವಾ ಸಿಂಧೂ ವೆಬ್ಸೈಟ್ಗೆ ಮೊದಲು ಭೇಟಿಯನ್ನು ನೀಡಿ.
- ಆನಂತರದಲ್ಲಿ ನೀವು ಹೊಸದಾಗಿದ್ದರೆ ಲಾಗಿನ್ ಅನ್ನು ಮಾಡಿಕೊಳ್ಳಿ.
- ಆನಂತರ ಅದರಲ್ಲಿ ನೀವು ಸರ್ಚ್ ಬಾರ್ ನಲ್ಲಿ ಉದ್ಯೋಗಿನಿ ಯೋಜನೆ ಎಂದು ಸರ್ಚ್ ಮಾಡಿ.
- ಆ ನಂತರ ಅದಕ್ಕೆ ಬೇಕಾಗುವಂತ ಪ್ರತಿಯೊಂದು ವೈಯಕ್ತಿಕ ಮಾಹಿತಿಗಳ ಹಾಗೂ ಉದ್ಯೋಗದ ವಿವರಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ.
- ತದನಂತರ ಅದಕ್ಕೆ ಬೇಕಾಗುವಂತ ಕೆಲವೊಂದಷ್ಟು ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಪಿಡಿಎಫ್ ಮೂಲಕ ಅಪ್ಲೋಡ್ ಮಾಡಿ.
- ಆನಂತರ ನೀವು ಭರ್ತಿ ಮಾಡಿರೋ ಪ್ರತಿಯೊಂದು ದಾಖಲೆಗಳು ಸರಿಯಾಗಿದ್ದರೆ Submit ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ.
LINK : Apply Now